ಗಣೇಶ ವಿಸರ್ಜಿಸಲು ಕಟ್ಲಾಪುರ ನಾಲೆಗೆ ತೆರಳಿದ್ದ 11 ಮಂದಿ ಜಲ ಸಮಾಧಿ….

ಮಧ್ಯಪ್ರದೇಶ ರಾಜಧಾನಿ ಭೋಪಾಲ್ ನಲ್ಲಿ ಗಣೇಶ ವಿಸರ್ಜಿಸಲು ಕಟ್ಲಾಪುರ ನಾಲೆಗೆ ತೆರಳಿದ್ದ 11 ಮಂದಿ ಜಲ ಸಮಾಧಿಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ 11 ಶವ ಪತ್ತೆಯಗಿದ್ದು, 6 ಮಂದಿಯನ್ನು ರಕ್ಷಿಸಲಾಗಿದೆ.

ಮುಂಜಾನೆ 4.30ರ ಹೊತ್ತಿಗೆ ಖಟ್ಲಾಪುರ ಘಾಟ್ ಬಳಿಯ ಕೆರೆಯಲ್ಲಿ ಗಣೇಶ ವಿಸರ್ಜನೆ ಮಾಡಲು 16 ಮಂದಿ ದೋಣಿಯಲ್ಲಿ ತೆರಳಿದ್ದರು. ಆದರೆ ಆಕಸ್ಮಿಕವಾಗಿ ದೋಣಿ ಪಲ್ಟಿಯಾಗಿ ಅದರಲಿದ್ದವರು ನೀರಿಗೆ ಬಿದ್ದಿದ್ದಾರೆ. ಈ ಬಗ್ಗೆ ತಿಳಿದ ತಕ್ಷಣ ರಕ್ಷಣಾ ಕಾರ್ಯಾಚರಣೆ ತಂಡ ಸ್ಥಳಕ್ಕೆ ಆಗಮಿಸಿ 16 ಮಂದಿಯಲ್ಲಿ ಐವರನ್ನು ರಕ್ಷಣೆ ಮಾಡಿದ್ದು, 11 ಮೃತದೇಹಗಳನ್ನು ಕೆರೆಯಿಂದ ಹೊರತೆಗೆಯಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಖಿಲ್ ಪಟೇಲ್ ಹೇಳಿದ್ದಾರೆ.

ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಬೋಪಾಲ್ ನಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಕಟಡ್ಲಾಪುರ ಕೆರೆಯಲ್ಲೂ ನೀರಿನ ಪ್ರಮಾಣ ಹೆಚ್ಚಾಗಿತ್ತು. ಹೀಗಿದ್ದರೂ ತುಂಬಿದ ಕೆರೆ ಮಧ್ಯೆ ಗಣೇಶ ವಿಸರ್ಜನೆಗೆ ತೆರಳಿದ್ದಾರೆ. ಅದರೆ ನೀರಿನ ಪ್ರಮಾಣ ಹೆಚ್ಚಾಗಿದ್ದು ನಿಯಂತ್ರಣ ಕಳೆದುಕೊಂಡ ದೋಣಿ ಅರ್ಧದಲ್ಲೇ ಮಗುಚಿದೆ. ಗಣೇಶ ಮೂರ್ತಿ ಹಿಡಿದು ಕುಳಿತಿದ್ದವರೆಲ್ಲಾ ಕೆರೆಗೆ ಬಿದ್ದಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.