ಖಾಸಗಿ ಫೈನಾನ್ಸ್ ಕಿರುಕುಳಕ್ಕೆ ಹೆದರಿ ವ್ಯಕ್ತಿ ಆತ್ಮಹತ್ಯೆ…..!

ಖಾಸಗಿ ಫೈನಾನ್ಸ್ ಕಿರುಕುಳಕ್ಕೆ ಹೆದರಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯದ ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹೆಮ್ಮನಹಳ್ಳಿ ಗ್ರಾಮದ ಪ್ರದೀಪ್(೪೦) ಮೃತ ದುರ್ದೈವಿ. ನೆನ್ನೆಯಷ್ಟೆ ಪ್ರದೀಪ್ ನ ಪತ್ನಿ ಕೂಡ ಅನಾರೋಗ್ಯದಿಂದ ಮೃತಪಟ್ಟಿದ್ರು. ಬೆಂಗಳೂರಿನ ಸುಂಕದಕಟ್ಟೆಯಲ್ಲಿ ವ್ಯವಹಾರ ನಡೆಸಲು‌ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಸಾಲ ಪಡೆದಿದ್ದರು.

ಪ್ರದೀಪ್ ವ್ಯವಹಾರದಲ್ಲಿ ನಷ್ಟ ಉಂಟಾಗಿದ್ದರಿಂದ ನಾಪತ್ತೆಯಾಗಿದ್ದ. ನೆನ್ನೆ ಪತ್ನಿ ಅನಾರೋಗ್ಯದಿಂದ ಸಾವೀಗೀಡಾಗಿದ್ದರಿಂದ ಊರಿಗೆ ಬಂದಿದ್ದ ಪ್ರದೀಪ್, ಊರಿನದಲ್ಲಿರೋ ವಿಷಯ ತಿಳಿದು ಫೈನಾನ್ಸ್ ಕಂಪನಿಯ ನೌಕರರು ಕಾರಿನಲ್ಲಿ ಊರಿಗೆ ಬಂದು ನೆನ್ನೆ ಬೆದರಿಕೆ ಹಾಕಿದ್ದಾರೆ. ಇಂದು ಸಾಲ ಕೊಡದಿದ್ರೆ ಎಲೆದೊಯ್ಯುವುದಾಗಿ ಬೆದರಿಸಿ ಬೆಳಿಗ್ಗೆ ಕಾರಿನಲ್ಲಿ ಮನೆಗೆ ಬಂದಿದ್ರು. ಇದ್ರಿಂದ ಹೆದರಿ ಮನೆಯ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾರೆ ಪ್ರದೀಪ್.

ಪ್ರದೀಪ್ ಸಾವಿನಿಂದ ಗ್ರಾಮದಲ್ಲಿ ಉಂಟಾದ ಅಶಾಂತಿ ವಾತಾವರಣ ಸೃಷ್ಟಿಯಾಗಿದ್ದು, ಫೈನಾನ್ಸ್ ಕಂಪನಿಯವರ ಕಿರುಕುಳಕ್ಕೆ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರಿಂದ ಫೈನಾನ್ಸ್ ಕಡೆಯ ಇಬ್ಬರುನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಗ್ರಾಮದಲ್ಲಿ ಮಡುಗಟ್ಟಿದ ಶೋಕ ,ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.