ಕ.ರ.ವೇ ಅಧ್ಯಕ್ಷ ನಾರಾಯಣಗೌಡ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ…

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ವಿರುದ್ಧ ಸೋಷಿಯಲ್ ಮೀಡಿಯಾ ವಾರ್ ಶುರುವಾಗಿದೆ. ಡಿಕೆಶಿ ಪರ ಹೋರಾಟಕ್ಕೆ ಮುಂದಾಗಿರೋ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡರ ವಿರುದ್ಧ ವಾಲ್ಮೀಕಿ ನಾಯಕ ಸಮಾಜದ ವಾಟ್ಸಾಪ್ ಗ್ರುಪ್ ಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಡಿಕೆಶಿ ಪರ ಹೋರಾಟದ ಸುದ್ದಿ ತಿಳಿಯುತ್ತಿದ್ದಂತೇ ವಾಲ್ಮೀಕಿ ನಾಯಕ ಸಮಾಜದ ಯುವಕರು ಕೆಂಡಕಾರುತ್ತಿದ್ದಾರೆ. ನಾರಾಯಣಗೌಡ ಬಣದಿಂದ ಹೊರಬರುವಂತೆ ಸಮಾಜದ ಕಾರ್ಯಕರ್ತರಿಗೆ ಮನವಿ ಮಾಡಲಾಗಿದೆ.

ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿರುವ ಮೆಸೇಜ್ಗಳು ಈ ರೀತಿಯಾಗಿವೆ :-

‘ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದಲ್ಲಿರುವ ವಾಲ್ಮೀಕಿ ನಾಯಕರೇ ಎಚ್ಚರ ಎಚ್ಚರ’ ‘ನಾರಾಯಣಗೌಡ ರಕ್ಷಣೆ ಮಾಡೋದು ಕರ್ನಾಟಕವನ್ನಲ್ಲ ಕೇವಲ ಒಕ್ಕಲಿಗ ನಾಯಕರನ್ನ’ ‘ಒಕ್ಕಲಿಗ ನಾಯಕ ಡಿಕೆಶಿ ಬೆನ್ನಿಗೆ ನಿಲ್ತಾರಂತೆ ನಾರಾಯಣಗೌಡ’ ‘ನಾರಾಯಣಗೌಡಗೆ ಬೇಕಾಗಿರೋದು ಡಿಕೆಶಿ & ತನ್ನ ಒಕ್ಕಲಿಗ ಸಮಾಜ’ ‘ವಾಲ್ಮೀಕಿ ನಾಯಕ ಸಮುದಾಯದ ಅನೇಕ ರಾಜಕೀಯ ನಾಯಕರಿಗೆ ಸಂಕಷ್ಟ ಎದುರಾದಾಗ ಮಾತಾಡ್ಲಿಲ್ಲ ಈ ‘ಗೌಡ”

‘ಏಕಾಏಕಿ ಡಿಕೆಶಿ ಬೆನ್ನಿಗೆ ನಿಲ್ಲೋ ಪ್ಲಾನ್ ಮಾಡಿದ್ದು ಯಾಕೆ..? ಡಿಕೆಶಿ ಒಕ್ಕಲಿಗ ಎಂಬ ಕಾರಣವೇ..?”ಡಿಕೆಶಿ & ಒಕ್ಕಲಿಗ ನಾಯಕರ ಬೆನ್ನಿಗೆ ನಿಲ್ಲೋ ನಾರಾಯಣಗೌಡನಿಗೆ ವಾಲ್ಮೀಕಿ ಸಮುದಾಯದ ಕಾರ್ಯಕರ್ತರು ಸಪೋರ್ಟ್ ಮಾಡ್ಬೇಕಾ..?’ ‘ಎಚ್ಚರ ವಾಲ್ಮೀಕಿ ನಾಯಕ ಸಮುದಾಯದ ಯುವಕರೇ ಎಚ್ಚರ…’ ‘ಕರ್ನಾಟಕ ರಕ್ಷಣಾ ವೇದಿಕೆ ಹೆಸರಲ್ಲಿ ನಾರಾಯಣಗೌಡ ರಾಜಕೀಯ ಮಾಡ್ತಿದ್ದಾರೆ’ ‘ತನ್ನ ಸಮುದಾಯದ ಮುಖಂಡ ಅಕ್ರಮ ಹಣ, ಆಸ್ತಿಗಳಿಕೆಯ ಆರೋಪದ ಮೇಲೆ ಜೈಲು ಸೇರಿದ್ರು ಅಂತಹವರಿಗೆ ಸಪೋರ್ಟ್ ಮಾಡ್ತಾನೆ’

‘ಇಂತಹ ನಾರಾಯಣಗೌಡನಿಗೆ ನೀವು ಸಪೋರ್ಟ್ ಮಾಡ್ಬೇಕಾ..?”ನಾರಾಯಣಗೌಡ ಬಣದಲ್ಲಿರುವ ವಾಲ್ಮೀಕಿ ನಾಯಕ ಯುವಕರೇ, ವಿಚಾರವಂತರೇ ಯೋಚಿಸಿ ಹೆಜ್ಜೆ ಇಡಿ”ನಾರಾಯಣಗೌಡ ಬಣ ಹಿಂದುಳಿದ, ದಲಿತ ವರ್ಗಗಳ ಪಾಲಿಗೆ ಇಲ್ಲದಂತಾಗಿದೆ”ಅದು ಒಕ್ಕಲಿಗ, ಲಿಂಗಾಯತರ ಪಾಲಿನ ವೇದಿಕೆಯಾಗಿದೆ’ ‘ದಲಿತರೇ & ಹಿಂದುಳಿದ ವರ್ಗದ ಕಾರ್ಯಕರ್ತರೇ ಇವತ್ತೇ ನಾರಾಯಣಗೌಡ ಬಣದಿಂದ ಹೊರ ಬನ್ನಿ’ ‘ನಾರಾಯಣಗೌಡನಿಗೆ ತಕ್ಕ ಪಾಠ ಕಲಿಸಿ’

ಆಕ್ರೋಶವನ್ನ ಸಾಮಾಜಿಕ ಜಾಲತಾಣಗಳಲ್ಲಿ ಯುವಕರು ಹೊರಹಾಕುತ್ತಿದ್ದಾರೆ. ದಲಿತ & ಹಿಂದುಳಿದ ವರ್ಗದ ಯುವಕರಿಗೂ ಮನವಿ ಮಾಡಿದ ಮೆಸೇಜ್ ವೈರಲ್ ಆಗಿವೆ. ವಾಲ್ಮೀಕಿ ನಾಯಕ ಸಮಾಜದ ವಾಟ್ಸಾಪ್ ಗ್ರುಪ್ ಗಳಲ್ಲಿ ಅದೇ ಚರ್ಚೆಯಾಗುತ್ತದೆ. ನಾರಾಯಣಗೌಡರಿಗೆ ಎದುರಾಗುತ್ತಾ ಜಾತಿ ಸಂಕಷ್ಟ..? ಅನ್ನೋದನ್ನ ಕಾದು ನೋಡಬೇಕಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.