ಕೋಳಿ ಫಾರ್ಮ್ ಗೆ ನುಗ್ಗಿದ ನೀರು : ಮಳೆ ಅವಾಂತರಕ್ಕೆ ಸಾವಿರಕ್ಕೂ ಹೆಚ್ಚು ಕೋಳಿಗಳು ಬಲಿ

ಹಾವೇರಿಯಲ್ಲಿ  ಮಳೆ ಅವಾಂತರಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ. ನೆನ್ನೆ ರಾತ್ರಿ ಸುರಿದ ಭಾರೀ ಮಳೆಗೆ ನೀರು ಕೋಳಿ ಫಾರ್ಮ್ ಗೆ ನುಗ್ಗಿ ದೊಡ್ಡ ಪ್ರಮಾಣದ ಹಾನಿಯನ್ನುಂಟು ಮಾಡಿದೆ.

ಹೌದು.. ಭಾರಿ ಪ್ರಮಾಣದ ಮಳೆ ನೀರು ಕೋಳಿ ಫಾರ್ಮಗೆ ನುಗ್ಗಿ ಸಾವಿರದ ಐದುನೂರು ಕೋಳಿಗಳು ಸಾವನ್ನಪ್ಪಿದ ಘಟನೆ  ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ  ನಡೆದಿದೆ. ರಾಜು ಭರಮಗೌಡ್ರ ಎಂಬುದುವರಿಗೆ ಸೇರಿದ ಕೋಳಿ ಫಾರ್ಮ್ ಇದು.

ನೀರಿನಲ್ಲಿ ಸಾವಿರಾರು ಮೌಲ್ಯದ ಕೋಳಿಗಳ ಮಾರಣಹೋಮ ಆಗಿದ್ದು ರಾಜು ಕಂಗಾಲಾಗಿದ್ದಾರೆ.

 

 

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.