ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋದ ಶೆಹ್ಲಾ ರಶೀದ್

ಕೇಂದ್ರ ಸರ್ಕಾರ ಇಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದೆ.

ರಾಜ್ಯಸಭೆಯಲ್ಲಿ ಗೃಹ ಸಚಿವರು 370ನೇ ವಿಧಿ ತೆಗೆದುಹಾಕುವ ಪ್ರಸ್ತಾವನೆ ಮಂಡಿಸಿದ್ರು. ಪ್ರಸ್ತಾವನೆ ಪ್ರಕಾರ, ಜಮ್ಮು-ಕಾಶ್ಮೀರವನ್ನು ಎರಡು ಭಾಗವಾಗಿ ವಿಂಗಡಿಸಲಾಗುವುದು. ಜಮ್ಮು-ಕಾಶ್ಮೀರ ಒಂದು ಭಾಗವಾದ್ರೆ ಲಡಾಖ್ ಇನ್ನೊಂದು ಭಾಗವಾಗಲಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗ್ತಿದೆ. ಷಾ ಫೈಸಲ್ ನೇತೃತ್ವದ ಪಕ್ಷ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ  ಶೆಹ್ಲಾ ರಶೀದ್  ಹೇಳಿದ್ದಾರೆ. ಪ್ರಗತಿಶೀಲ ಶಕ್ತಿಗಳು ಇದ್ರ ವಿರುದ್ಧ ಒಟ್ಟಾಗಿ ಹೋರಾಟ ನಡೆಸುತ್ತೇವೆ. ದೆಹಲಿ, ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಲಿದೆ ಎಂದಿದ್ದಾರೆ.

ಇತ್ತ ಸಂಸತ್ ನಲ್ಲಿ ಪಿಡಿಪಿ ಸಂಸದರಾದ ನಜೀರ್ ಅಹ್ಮದ್ ಲವಾಯ್ ಹಾಗೂ ಮೀರ್ ಮೊಹಮ್ಮದ್ ಸಂವಿಧಾನದ ಪ್ರತಿಯನ್ನು ಕಿತ್ತು ಹಾಕಿ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.