ಕೆ.ಆರ್.ಎಸ್. ಡ್ಯಾಂ ಗೆ ಕಡಿಮೆಯಾದ ಒಳಹರಿವು : ಜನ್ರಲ್ಲಿ ಮಾಯವಾದ ಪ್ರವಾಹ ಭೀತಿ

ಕಳೆದ ಮೂರು ದಿನಗಳಿಂದ ಮಂಡ್ಯದ ಕೆ.ಆರ್.ಎಸ್ ಡ್ಯಾಂ ನಿಂದ ಬಿಡ್ತಿದ್ದ ಹೆಚ್ಚಿನ ನೀರಿನಿಂದಾಂಗಿ ಕೆ.ಆರ್.ಎಸ್.ಕೆಳಭಾಗದಲ್ಲಿ ಪ್ರವಾಹ ಉಂಟಾಗಿತ್ತು.ಪ್ರವಾಹದಿಂದಾಗಿ ನದಿ ಪಾತ್ರದ ಜಮೀನು ಕೆಲವು ತಗ್ಗಿನ ಜನವಸತಿ ಪ್ರದೇಶ,ಸೇರಿದಂತೆ ಪ್ರಸಿದ್ದ ರಂಗನತಿಟ್ಟು ಪಕ್ಷಿಧಾಮ, ಹಾಗೂ ಹಲವು ದೇಗುಲಗಳು ಹಾಗೂ ಪಾರಂಪರಿಕ ಐತಿಹಾಸಕ ವೆಲ್ಲೆಸ್ಲಿ ಸೇತುವೆ ಕೂಡ ಜಲಾವೃತವಾಗಿತ್ತು. Krs ನ ಒಳಹರಿವುಯಾದರಿಂದ ಜಲಾಶಯದ ಹೊರ ಹರಿವನ್ನು ನಿಲ್ಲಿಸಲಾಗಿದೆ.ಇದ್ರಿಂದಾಗಿ ಆತಂಕ ಸೃಷ್ಟಿಸಿದ್ದ ಕಾವೇರಿ ಪ್ರವಾಹ ಜಿಲ್ಲೆಯಲ್ಲು ಇಳಿಮುಖವಾಗಿದೆ.

ಹೌದು ಕೊಡಗಿನಲ್ಲಿ ವ್ಯಾಪಕವಾಗಿ‌ಮಳೆಯಾಗಿದ್ದರಿಂದ ಮಂಡ್ಯ ಜಿಲ್ಲೆಯ ಕೆ.ಆರ್.ಎಸ್ ಜಲಾಶಯ ಒಂದೇ ವಾರದಲ್ಲಿ ಭರ್ತಿಯಾಗಿತ್ತು. ಅಲ್ದೆ ಹೆಚ್ಚಿನ ನೀರನ್ನು ಕೂಡ ಡ್ಯಾಂ ನಿಂದ ನದಿಗೆ ಬಿಡಲಾಗಿತ್ತು. ಇದ್ರಿಂದಾಗಿ ಕಳೆದ ಮೂರು ದಿನಗಳಿಂದ ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗಿ ಶ್ರೀರಂಗಪಟ್ಟಣ ತಾಲೂಕಿನ ಕಾವೇರಿ ಪ್ರವಾಹ ಆತಂಕ ಸೃಷ್ಟಿಮಾಡಿತ್ತು. ಶ್ರೀರಂಗಪಟ್ಟಣದ ಪ್ರಸಿದ್ದ ರಂಗನತಿಟ್ಟು ಪಕ್ಷಿಧಾಮ, ಪಶ್ಚಿಮವಾಹಿನಿ , ಸ್ನಾನಘಟ್ಟ, ವೆಲ್ಲೆಸ್ಲಿ ಸೇತುವೆ,ನಿಮಿಷಾಂಭ ದೇಗುಲ ಜಲಾವೃತವಾಗಿತ್ತು. ಅಲ್ಲದೆ ನದೀ ಪಾತ್ರದ ಜಮೀನುಗಳು ಸಂಪೂರ್ಣವಾಗಿ ಮುಳುಗಡೆಯಾಗಿ ತಗ್ಗು ಪ್ರದೇಶದ ಜನವಸತಿ ಪ್ರದೇಶಗಳು ಕೂಡ ಜಲಾವೃತವಾಗಿ ಕಾವೇರಿ ನದಿ ಪ್ರವಾಹ ಆತಂಕ ಸೃಷ್ಟಿ ಮಾಡಿತ್ತು. ಆದ್ರೆ ಕೆ.ಆರ್.ಎಸ್ .ಜಲಾಶಯಕ್ಕೆ ಬರ್ತಿದ್ದ ಒಳ ಹರಿವು ಕಡಿಮೆಯಾದ ಹಿನ್ನಲೆಯಲ್ಲಿ ಹೊರ ಹರಿವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದ್ದು,ಕಾವೇರಿ ಪ್ರವಾಹ ಸಂಪೂರ್ಣವಾಗಿ ಇಳಿಮುಖವಾಗಿದೆ. ಕಾವೇರಿ ಪ್ರವಾಹ ಇಳಿಮುಖದಿಂದ ಜಲಾವೃತವಾಗಿದ್ದ ರಂಗನತಿಟ್ಟು ಪಕ್ಷಿಧಾಮ, ಪಶ್ಚಿಮವಾಹಿನಿ , ಸ್ನಾನಘಟ್ಟ, ವೆಲ್ಲೆಸ್ಲಿ ಸೇತುವೆ,ನಿಮಿಷಾಂಭ ದೇಗುಲಗಳು ಸಹಜ ಸ್ಥಿತಿಗೆ ಬಂದಿದೆ.ಮೂರು ದಿನಗಳಿಂದ ಕಾವೇರಿ ಪ್ರವಾಹ ನೋಡಲು ಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿ ಬರ್ತಿದ್ದ ಜನ ಜಂಗುಳಿ ಪ್ರವಾಹ ಇಳಿಮುಖದಿಂದ ಮಾಯವಾಗಿದ್ದು ಆ ಸ್ಥಳ ಬಿಕೋ ಅಂತಿದೆ.ಈ ಸ್ಥಳದ ಬಳಿ ಕಾವೇರಿ ಪ್ರವಾಹ ಕಣ್ತುಂಬಿಕೊಳ್ಳಲು ಬಂದಿದ್ದವರಿಗೆ ಪ್ರವಾಹ ಇಳಿಮುಖ ನಿರಾಶೆ ಮೂಡಿಸಿದೆ.

ಇನ್ನು ಕಾವೇರಿ ಪ್ರವಾಹ ಇಳಿಮುಖವಾಗಿದ್ದರಿಂದ ಜಲಾವೃತವಾಗಿದ್ದ ಶ್ರೀರಂಗಪಟ್ಡಣದ ವೆಲ್ಲೆಸ್ಲಿ ಸೇತುವೆ ಬಳಿಯ ಪ್ರದೇಶ ಸಹಜ ಬಿಕೋ ಎನ್ನುತ್ತಿದೆ. ಇನ್ನು ನಿಮಿಷಾಂಭ ದೇಗುಲದ ಬಳಿ ಪ್ರವಾಗದಿಂದ ವಿರಳವಾಗಿದ್ದ ಭಕ್ತರ ಸಂಖ್ಯೆ ನಿಧಾನವಾಗಿ ಏರ ತೊಡಗಿದ್ದು ಸಹಜ ಸ್ಥಿತಿಯತ್ತ ಮರಳುತ್ತಿದೆ. ದೇವಾಲಯದ ಮುಂಭಾಗ ಸ್ಥಳೀಯರು ಎಂದಿನಂತೆ ವ್ಯಾಪಾರ ವಹಿವಾಟು ಮಾದೇವಾಲಯದ ಆಡಳಿತ ಮಂಡಳಿ ಪ್ರವಾಹ ಇಳಿಮುಖವಾಗಿದ್ರು ನದಿ ದಂಡೆಯ ಬಳಿ ಭಕ್ತರು ತೆರಳದಂತೆ ಮನವಿ ಮಾಡ್ತಾ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ‌.

ಇನ್ನು ಪ್ರವಾಹದಿಂದ ಸಂಪೂರ್ಣ ಜಲಾವೃತವಾಗಿದ್ದ ಪಶ್ವಿಮವಾಹಿನಿ ಮತ್ತು ಸ್ವಾಘಟ್ಟದಲ್ಲಿ ಎಂದೊನ‌ಸಹಜ ಸ್ಥಿತಿ ಇದ್ರು‌ಜನ್ರು ಆತಂಕದಿಂದ್ಲೇ ನದಿ ಬಳಿ ತೆರಳಿ ಧಾರ್ಮಿಕ ಕೈಗೊಂಡ್ರೆ, ಜನ್ರು ಬಳಿ ಕುಳಿತು ಪ್ರವಾಹದ ಬಳಿಕ ನದಿ ಹೇಗಿದೆ ಅನ್ನೋದ್ನ‌ ನೋಡಲು ಬರ್ತಿದ್ರು,ಇನ್ನು ಕಾವೇರಿ ನದಿಯ ರಂಗನತಿಟ್ಟು ಪಕ್ಷಿಧಾಮದಲ್ಲಿ ಪ್ರವಾಹ ಇಳಿಕೆಯಾಗಿದ್ರು ಪ್ರವಾಸಿಗರಿಗೆ ಮುನ್ನೇಚ್ಚರಿಕೆ ಕ್ರಮವಾಗಿ ಪ್ರವೇಶ ನಿರ್ಬಂಧ ಹೇರಲಾಗಿದೆ. ಅಲ್ದೆ ಬೋಟಿಂಗ್ ಕೂಡ ಸ್ಥಗಿತಗೊಳಿಸಲಾಗಿದೆ. ಪ್ರವಾಹದಿಂದ ಕಚೇರಿ ಮತ್ತು ವಾಕಿಂಗ್ ಪಾತ್ ಗಳಲ್ಲಿ ಮಣ್ಣು ತುಂಬಿದ್ದು ಸಿಬ್ಬಂದಿಗಳು ಸ್ವಚ್ಚತಾ ಕಾರ್ಯ ಮಾಡ್ತಿದ್ದಾರೆ. ರಂಗನತಿಟ್ಟು ನೋಡಲು ಬಂದ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ ನಿರಾಶೆ ಮೂಡಿಸಿದ್ದು ಬರಿಗೈಲಿ ವಾಪಸ್ಸು ತೆರಳುವಂತಾಯ್ತು.

ಒಟ್ಟಾರೆ ಕಾವೇರಿಯ ನದಿಯಲ್ಲಿ ಪ್ರವಾಹ ಇಳಿಮುಖವಾಗಿರೋದು ಪ್ರವಾಹ ಭೀತಿಯ ಆತಂಕದಲ್ಲಿ ಕೆ.ಆರ್.ಎಸ್ ನದಿ ಪಾತ್ರದ ಶ್ರೀರಂಗಪಟ್ಟಣದ ಜನ್ರು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.