ಕೆರೆಯಲ್ಲಿ ಮುಳಗಿದ್ದ ಚಿನ್ನದ ಸರ ಹುಡುಕಿಕೊಟ್ಟ ರೋಬೋ! : ರೋಬೋ ಕಾರ್ಯಾಚರಣೆಗೆ ಗ್ರಾಮಸ್ಥರ ಮೆಚ್ಚುಗೆ

ಕೆರೆಯಲ್ಲಿ ಮುಳಗಿದ್ದ ಚಿನ್ನದ ಸರ ಹುಡುಕಿಕೊಟ್ಟ ರೋಬೋ ಗ್ರಾಮಸ್ಥರು ಫುಲ್ ಫಿದಾ ಆಗಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ವಿಜ್ಞಾನಿ ರೋಬೋ ಮಂಜೇಗೌಡರ ಅನ್ವೇಷಕ ರೋಬೋದಿಂದ ಕಳೆದು ಹೋಗಿದ್ದ ಸರ ಪತ್ತೆ ಮಾಡಿದ್ದಾನೆ. ನೆನ್ನೆ ರಾತ್ರಿ ಗ್ರಾಮದಲ್ಲಿ ಪ್ರತಿಷ್ಟಾಪಿಸಿದ್ದ ಗಣೇಶ ವಿಸರ್ಜನೆ ವೇಳೆ ಮಂಜಣ್ಣ ಎಂಬುವರ ೨೫ ಗ್ರಾಂ ಚಿನ್ನದ ಸರ ಕಳೆದು ಹೋಗಿತ್ತು.

ಇಂದು ರೋಬೋ ಮಂಜೇಗೌಡರ ಅನ್ವೇಷಕ ರೋಬೋ ಸಹಾಯದಿಂದ ಕಾರ್ಯಾಚರಣೆ ನಡೆಸಿ ಚಿನ್ನದ ಸರ ಪತ್ತೆ ಮಾಡಲಾಗಿದೆ. ನೀರಿನಲ್ಲಿ ಮುಳುಗಿದವರನ್ನು ಪತ್ತೆ ಹಚ್ಚಲು ಅನ್ವೇಷಕ ರೋಬೋವನ್ನು ತಯಾರಿಸಿರೋ ಮಂಜೇಗೌಡ್ರು ಈ ಪ್ರಯತ್ನಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ಅನ್ವೇಷಕ ರೋಬೋ ಬಳಸಿ ಕೆರೆ ತಳದ ಶೋಧನೆ‌ ನಡೆಸಿ ಕಳೆದಿದ್ದ ಚಿನ್ನದ ಸರ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ರೋಬೋದಿಂದ ನೀರಿನ ತಳದಿಂದ ಚಿನ್ನದ ಸರ ತೆಗೆದು ಸರ ಕಳೆದುಕೊಂಡ ವ್ಯಕ್ತಿಗೆ ಮಂಜೇಗೌಡ ವಾಪಸ್ಸು ನೀಡಿದ್ದಾರೆ.

ಮಂಜೇಗೌಡರ ಅನ್ವೇಷಕ ರೋಬೋ ಕಾರ್ಯಾಚರಣೆಗೆ ಗ್ರಾಮಸ್ಥರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.