ಕೆಜಿಎಫ್ ಚಿತ್ರ ತಂಡಕ್ಕೆ ಮತ್ತೊಂದು ಶಾಕ್ : ಚಿತ್ರಕ್ಕೆ ತಡೆಯಾಜ್ಞೆ ನೀಡುವಂತೆ ಮತ್ತೊಂದು ದೂರು

ಹೈಕೋರ್ಟ್ ತಡೆಯಾಜ್ಞೆ ತೆರವು ಬೆನ್ನಲ್ಲೆ, ಕೆಜಿಎಫ್ ಚಿತ್ರ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದೆ.

ಹೌದು..  ರಾಂಕಿಂಗ್ ಸ್ಟಾರ್‌ ಯಶ್ ಅಭಿನಯದ ಕೆಜಿಎಫ್ – 2 ಚಿತ್ರಕ್ಕೆ ತಡೆಯಾಜ್ಞೆ ನೀಡುವಂತೆ ಮತ್ತೊಂದು ದೂರು ನೀಡಲಾಗಿದೆ ಎನ್ನಲಾಗುತ್ತಿದೆ. ಕೆಜಿಎಫ್ ನಟೋರಿಯಸ್ ರೌಡಿ ತಂಗಂ ಕುಟುಂಬದಿಂದ ಚಿತ್ರದ ವಿರುದ್ಧ ಕೆಜಿಎಫ್ ಕೋರ್ಟ್ ನಲ್ಲಿ ಕೇಸ್ ದಾಖಲಾಗಿದೆ.ಕೆಜಿಎಫ್ ಚಾಪ್ಟರ್-1 ಚಿತ್ರದಲ್ಲಿ ಬರುವ ಯಶ್ ಪಾತ್ರ ತಮ್ಮ ಮಗನ ನಿಜ ಜೀವನದ ಪಾತ್ರ ಹೋಲುತ್ತದೆ ಎಂದು ದೂರು ನೀಡಿದ್ದಾರೆ ಕೆಜಿಎಫ್ ನಟೋರಿಯಸ್ ರೌಡಿ ತಂಗಂ.

ರೌಡಿ ತಂಗಂ ತಾಯಿ ಪೌಳಿ ರಿಂದ ಕೋರ್ಟ್ ನಲ್ಲಿ ಕೇಸ್ ದಾಖಲಿಸಿದ್ದಾರೆ. ಕುಟುಂಬದ ಅನುಮತಿ ಇಲ್ಲದೇ ಚಿತ್ರದಲ್ಲಿ ನಮ್ಮ ಮಗನ ನಿಜಜೀವನದ ಪಾತ್ರ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಕೆಜಿಎಫ್ ಚಾಪ್ಟರ್ ೧ ರಲ್ಲಿ ಯಶ್ ನಟನೆ ಮಗ ತಂಗಂ ಜೀವನ ಹೋಲುತ್ತದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.ಕೆಜಿಎಫ್ ಚಾಪ್ಟರ್-2 ಚಿತ್ರ ತಂಗಂ ಜೀವನಾಧಾರಿತ ಎಂದು ತಡೆ ನೀಡುವಂತೆ ದೂರು ನೀಡಲಾಗಿದೆ.

ಅಕ್ಟೋಬರ್ 9 ಕ್ಕೆ ವಿಚಾರಣೆಗೆ ಹಾಜರಾಗುವಂತೆ ಚಿತ್ರ ತಂಡಕ್ಕೆ ಕೆಜಿಎಪ್ ಕೋರ್ಟ್ ಸಮನ್ಸ್ ನೀಡಿದೆ. 1997 ರಲ್ಲಿ ಆಂಧ್ರದ ಕುಪ್ಪಂನ ರೈಲ್ವೆ ಗೇಟ್ ಬಳಿ ಕರ್ನಾಟಕ ಪೋಲಿಸರು ತಂಗಂನನ್ನು ಎನ್ ಕೌಂಟರ್ ಮಾಡಿದ್ರು. ಇತ್ತೀಚೆಗೆ ಸೈನೆಡ್ ಗುಡ್ಡದ ಪರಿಸರ ನಾಶ ಮತ್ತು ಕೆಜಿಎಪ್ ಹೆಸರಿನ ಇತಿಹಾಸಕ್ಕೆ ಚಿತ್ರತಂಡ ಧಕ್ಕೆ ತರುತ್ತಿದೆ ಎಂದು ಶ್ರೀನಿವಾಸ್ ಎನ್ನುವರು ದೂರು ನೀಡಿ ಚಿತ್ರೀಕರಣಕ್ಕೆ ತಡೆಯಾಜ್ಞೆ ತಂದಿದ್ದರು. ಕೆಜಿಎಪ್ ನ್ಯಾಯಾಲಯ ತಡೆಯಾಜ್ಞೆ ಆದೇಶದ ವಿರುದ್ಧ ಹೈಕೋರ್ಟ್ ನಲ್ಲಿ ನ್ಯಾಯಾಂಗ ಹೋರಾಟ ನಡೆಸಿ ತಡೆಯಾಜ್ಞೆ ತೆರವು ಮಾಡಿಸಿದ್ದ ಚಿತ್ರತಂಡಕ್ಕೆ ಸದಯ ಮತ್ತೊಂದು ಸಂಕಷ್ಟ ಎದುರಾಗಿದ್ದು, ಕೋರ್ಟ್ ತೀರ್ಪಿನ ಮೇಲೆ ಚಿತ್ರದ ಚಿತ್ರೀಕರಣ ನಿರ್ಧರಿಸಲಾಗುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.