ಕುಮಾರಣ್ಣ ಬೆಂಬಲ ಕೊಟ್ಟಿದ್ದಕ್ಕೆ ಚಿರಋಣಿ : ಹೊಸಕೋಟೆಯಲ್ಲಿ ಭರ್ಜರಿ ಪ್ರಚಾರ ನಡೆಸಿದ ಶರತ್ ಬಚ್ಚೇಗೌಡ

ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್ ಹಿನ್ನಲೆ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಪ್ರಚಾರ ನಡೆಸುತ್ತಿದ್ದಾರೆ.

ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿಯ ಬಾಳೇನಹಳ್ಳಿ, ದೊಡ್ಡ ಅರಳಗೆರೆ ಗ್ರಾಮದಲ್ಲಿ ಸಂಸದ ಬಿನ್ ಬಚ್ಚೇಗೌಡ ಸಹೋದರ ಗೋಪಾಲಗೌಡ ನೇತೃತ್ವದಲ್ಲಿ ಪ್ರಚಾರಸಭೆ ಆರಂಭಗೊಂಡಿದೆ. ಪ್ರಚಾರ ಸಭೆಯಲ್ಲಿ ಎಂಟಿಬಿ ನಾಗರಾಜ್ ವಿರುದ್ದ ವಾಗ್ದಾಳಿ ನಡೆಸ್ತಿರುವ ಶರತ್ ಬಚ್ಚೇಗೌಡ ಪ್ರಚಾರಕ್ಕೆ ಸೂಲಿಬೆಲೆ ಹೋಬಳಿ ಸುತ್ತ ಮುತ್ತ ಹಿರಿಯ ಮುಖಂಡರು ಸಾಥ್ ನೀಡಿದ್ದಾರೆ.

ಇಡಿ ಐಟಿ ಇಲಾಖೆಗೆ ಹೆದರಿ ಬಿಜೆಪಿ ಸೇರಿರೋದಾಗಿ ಹೇಳಿ ಮತ ಯಾಚನೆ ಮಾಡುತ್ತಿದ್ದು, ಈ ಬಾರಿಯ ಉಪಚುನಾವಣೆಯ ಕಾವು ರಂಗೇರಿದೆ.

ಈ ವೇಳೆ ತಮಗೆ ಹೆಚ್ ಡಿ ಕುಮಾರಸ್ವಾಮಿ ಬೆಂಬಲ ವಿಚಾರವಾಗಿ ಮಾತನಾಡಿದ ಶರತ್ ಬಚ್ಚೇಗೌಡ, ಕುಮಾರಣ್ಣ ಬೆಂಬಲ ಕೊಟ್ಟಿದ್ದಕ್ಕೆ ನಾನು ಅವ್ರಿಗೆ ಚಿರಋಣಿ. ನಾನು ಸ್ವತಂತ್ರ ಅಭ್ಯರ್ಥಿ ಹಿನ್ನಲೆ ಎಲ್ಲರ ಬೆಂಬಲ ನಿರೀಕ್ಷೆ ಮಾಡುವೆ.
ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ನನ್ನದು ಸ್ವಾಭಿಮಾನಿ ಹೋರಾಟ. ವಿಶೇಷವಾಗಿ ಕುಮಾರಣ್ಣ ಬೆಂಬಲ ಸೂಚಿಸಿದ್ದು ಸ್ವಾಗತ ಮಾಡುವೆ ಎಂದರು.

ಜೊತೆಗೆ ಮಂಡ್ಯದಂತೆ ಹೊಸಕೋಟೆ ಕ್ಷೇತ್ರದಲ್ಲಿ ಸ್ವಾಭಿಮಾನಿ ಹೋರಾಟ ನಡೆಯಲಿದೆ. ಸುಮಕ್ಕ ಸ್ವಾಭಿಮಾನಿಯಾಗಿ ಮಂಡ್ಯದಲ್ಲಿ ಹೋರಾಡಿ ಗೆದ್ದವರು. ರಾಜ್ಯದ ೨೨೪ ಕ್ಷೇತ್ರಗಳಿಗೂ ಹೊಸಕೋಟೆ ಸ್ವಾಭಿಮಾನ ತಿಳಿಸಬೇಕಿದೆ.  ಹೊಸಕೋಟೆಯಲ್ಲಿ ದೊಡ್ಡ ಸಮಾವೇಶ ರ್ಯಾಲಿ ನಾನು ಮಾಡೊಲ್ಲ, ಸಭೆಗಳ ಮೂಲಕವೇ ಪ್ರಚಾರ ಮಾಡುವೆ ಎಂದರು.

ಶರತ್ ಬಚ್ಚೇಗೌಡ ಪ್ರಚಾರದಲ್ಲಿ ತಂದೆಯ ಅನುಪಸ್ತಿತಿ ಹಿನ್ನಲೆ ತಂದೆ ತಾಯಿ ದೇವರಿದ್ದಂತೆ ಅವರ ಆಶೀರ್ವಾದ ಸದಾ ಇರುತ್ತೆ. ಬಚ್ಷೇಗೌಡರು ಪ್ರತ್ಯಕ್ಷ್ಯವಾಗಿ ಇಲ್ಲದಿದ್ದರು, ಪರೋಕ್ಷವಾಗಿ ನನ್ನ ಹಿಂದೆ ಇರ್ತಾರೆ. ನನ್ನ ಪಾಲಿಗೆ ನನ್ನ ತಂದೆ ತಾಯಿಯೆ ದೇವರು ಎಂದು ತಂದೆ ತಾಯಿ ಬಗ್ಗೆ ಗೌರವ ಸೂಚಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.