ಕಾಂಗ್ರೆಸ್ ಪಕ್ಷ ಹೋಳಾಗುವ ಅಪಾಯ ತಪ್ಪಿಸಲು ಹೊಣೆ ಹೊತ್ತ ಸೋನಿಯಾ

ಕಾಂಗ್ರೆಸ್ ಪಕ್ಷದ ಅದ್ಯಕ್ಷತೆಯನ್ನು ಸೋನಿಯಾ ಗಾಂಧಿ ಒಲ್ಲದ ಮನಸ್ಸಿನಿಂದ ಒಪ್ಪಿದ್ದಾದರೂ ಏಕೆ? ಹಾಗೆ ಮಾಡುವುದೇ ಆಗಿದ್ದಲ್ಲಿ ರಾಹುಲ್ ರಾಜೀನಾಮೆ ನೀಡಿದ ಸನಿಹದಲ್ಲಿಯೇ ಅಧ್ಯಕ್ಷರಾಗಬಹುದಿತ್ತಲ್ಲ. ಸುಮಾರು ಎರಡು ತಿಂಗಳ ಪಕ್ಷ ನಾವಿಕನಿಲ್ಲದ ನೌಕೆಯಂತಾಗಲು ಬಿಟ್ಟಿದ್ದು ಏಕೆ? ಇದು ಸಾಂಆನ್ಯ ಕಾಂಗ್ರೆಸಿಗರ ಪ್ರಶ್ನೆ.
ಕಳೆದ ಶನಿವಾರ ಸುಮಾರು 12 ತಾಸಿನ ಚರ್ಚೆ, ಸಮಾಲೋಚನೆ, ಸಭೆಗಳ ಬಳಿಕ ಸರಿರಾತ್ರಿ ಸುಮಾರಿಗೆ ರಾಹುಲ್ ಗಾಂಧಿ ಜಾಗದಲ್ಲಿ ಸೋನಿಯಾ ಪಕ್ಷದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ ಎಂಬ ಘೋಷಣೆ ಹೊರಬಿತ್ತು. ಇದು ಅನೇಕರಲ್ಲಿ ಅಚ್ಚರಿಯನ್ನೂ ಮೂಡಿಸಿತ್ತು.

ಆದರೆ ಸಭೆಯ ಒಳಗಿದ್ದವರ ಪ್ರಕಾರ ಸೋನಿಯಾ ಆರಂಭದಲ್ಲಿ ಈ ಹೊಣೆ ಹೊರಲು ಸಿದ್ಧರಿರಲಿಲ್ಲ. ಅದರಲ್ಲಿಯೂ ತಮ್ಮ ಪುತ್ರ ಒಲ್ಲೆ ಎಂದ ಸ್ಥಾನ ತುಂಬುವುದು ಎಷ್ಟು ಸರಿ ಎಂಬುದು ಸೋನಿಯಾ ಆಲೋಚನೆಯಾಗಿತ್ತು.

ಆದರೆ ತೀರಾ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಪಕ್ಷಕ್ಕೆ ನಿಮ್ಮ ನಾಯಕತ್ವ ಇಲ್ಲದಿದ್ದರೇ ಪಕ್ಷ ಒಡೆದು ಚೂರಾಗುತ್ತದೆ ಎಂಬ ಹಿರಿಯ ಮುಖಂಡರ ಮಾತು ಸೋನಿಯಾ ಮನಸ್ಸು ಬದಲಿಸುವಂತೆ ಮಾಡಿತು. ಪ್ರಿಯಾಂಕಾ ಗಾಂಧಿ ಸಹ ಪಕ್ಷದ ಹಿತದೃಷ್ಟಿಯಿಂದ ಈ ಸಲಹೆಗೆ ಒಪ್ಪಿಗೆ ನೀಡಿದ ಮೇಲೆ ಸೋನಿಯಾ ನಿರ್ಧಾರ ಸಲೀಸಾಯಿತು. .

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.