ಕಾಂಗ್ರೆಸ್ ನವರನ್ನು ನಿರಾಶ್ರಿತರಿಗೆ ಹೋಲಿಸಿ ಕೆ ಎಸ್ ಈಶ್ವರಪ್ಪ ವಿವಾದಿತ ಹೇಳಿಕೆ…

ಕಾಂಗ್ರೆಸ್ ನವರನ್ನು ನಿರಾಶ್ರಿತರಿಗೆ ಹೋಲಿಸಿದ ನೂತನ ಸಚಿವ ಕೆ ಎಸ್ ಈಶ್ವರಪ್ಪ ವಿವಾದಿತ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬಾಗಲಕೋಟೆಯಲ್ಲಿ ಸಂತ್ರಸ್ತರನ್ನುದ್ದೇಶಿಸಿ ಮಾತನಾಡಿದ ಕೆ ಎಸ್ ಈಶ್ವರಪ್ಪ, ಜಲಪ್ರಳಯ,ಪ್ರವಾಹ ಪೀಡಿತ ಸಂದರ್ಭದಲ್ಲಿ ಕಾಂಗ್ರೆಸ್ ನವರು ನಿರಾಶ್ರಿತರಾಗಿದ್ದಾರೆಂದು ವಿವಾದಿತ ಹೇಳಿಕೆ ನೀಡಿದ್ದಾರೆ.

ನಿರಾಶ್ರತರಿಗೆ ಉಮೇಶ್ ಕತ್ತಿ ನೆರವು ಏನಾದರೂ ಮಾಡಬಹುದೇನೋ!? ಸಿದ್ದರಾಮಯ್ಯನವರು ಉಮೇಶ್ ಕತ್ತಿಯನ್ನು ಕರೆದಿರಬಹುದು. ಉಮೇಶ್ ಕತ್ತಿ ಸಿದ್ದರಾಮಯ್ಯ ಗೆ ಫೋನ್ ಕರೆ, ಭೇಟೀಯಾಗುವ ವಿಚಾರಕ್ಕೆ ಈಶ್ವರಪ್ಪ ಈ ವಿವಾದಿತ ಹೇಳಿಕೆ ನೀಡಿದ್ದಾರೆ.

ಬೆಳಿಗ್ಗೆ ನನ್ನೊಂದಿಗೆ ಉಮೇಶ್ ಕತ್ತಿ ಮಾತನಾಡಿದ್ದಾರೆ. ನಾಳೆ ನನಗೆ ಬೆಂಗಳೂರಿನಲ್ಲಿ ಸಿಗ್ತೀನಿ ಎಂದಿದ್ದಾರೆ. ಉಮೇಶ್ ಕತ್ತಿ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ನನಗೆ ಹೇಳಿದ್ದಾರೆ. ಯಾವುದೇ ಊಹಾಪೋಹಕ್ಕೆ ಬೆಲೆ ಕೊಡಬೇಡಿ. ಸಿದ್ದರಾಮಯ್ಯ ಸರ್ಕಾರ ಬಿದ್ದು ಹೋಗಿದೆ ಎಂದು ವಿಧಿಯಿಲ್ಲದೆ ಎಲ್ಲರನ್ನೂ ಭೇಟಿಯಾಗ್ತಾರೆ.

ಇರುವ ೧೭-೧೮ಜನ ಯಾಕೆ ಕಾಂಗ್ರೆಸ್ ಬಿಟ್ಟು ಹೋದ್ರು ಅದನ್ನು ಯೋಚನೆ ಮಾಡ್ಲಿ. ಉಮೇಶ್ ಕತ್ತಿ , ಇನ್ನೊಬ್ಬರು ಬಂದು ಭೇಟಿ ಮಾಡ್ತಾರೆ ಅಂತಲ್ಲ ಎಂದು ಬಾಗಲಕೋಟೆಯಲ್ಲಿ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.