ಕಸದ ಬುಟ್ಟಿಗೆ ಅಂಬೇಡ್ಕರ್ ಅವರ ಭಾವಚಿತ್ರ ಎಸೆದು ಅಪಮಾನ..!

ಕಸದ ಬುಟ್ಟಿಗೆ ಅಂಬೇಡ್ಕರ್ ಭಾವಚಿತ್ರಕ್ಕೆಎಸೆದು ಅಪಮಾನ ಮಾಡಿದ ಘಟನೆ ಮಂಡ್ಯದ ಪಾಂಡವಪುರ ತಾಲೂಕು ಕಚೇರಿಯಲ್ಲಿನ ಶಾಸಕರ ಕೊಠಡಿಯಲ್ಲಿ ನಡೆದಿದೆ.

ಮಾಜಿ ಜಿಲ್ಲಾ ಉಸ್ತುವಾರಿ ಶಾಸಕ ಪುಟ್ಟರಾಜು ಕಚೇರಿಯಲ್ಲಿ ಕಸದ ಬುಟ್ಟಿಯಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕಲಾಗಿದೆ. ಶಾಸಕರ ಕಚೇರಿ ನವೀಕರಣದ ಹೆಸರಲ್ಲಿ ಅಂಬೇಡ್ಕರ್ ಭಾವಚಿತ್ರ ಕಸದ ಬುಟ್ಟಿಗೆ ಸೇರಿದೆ.

ಕಸದ ಬುಟ್ಟಿಯಲ್ಲಿ ಅಂಬೇಡ್ಕರ್ ಭಾವಚಿತ್ರವಿದ್ರು ಅಧಿಕಾರಿಗಳು ಗಮನಿಸಿಲ್ಲ ಎಂದು ಆರೋಪಿಸಲಾಗುತ್ತಿದೆ.ಕಸದಬುಟ್ಟಿಯಲ್ಲಿರಯವ ಅಂಬೇಡ್ಕರ್ ಭಾವಚಿತ್ರದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ್ದಕ್ಕೆ ದಲಿತ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸಿವೆ.

ಸೋಷಿಯಲ್ ಮೀಡೀಯಾದಲ್ಲೂ ಅಂಬೇಡ್ಕರ್ ಅಪನಾನಕ್ಕೆ ನೆಟ್ಟಿಗರ ಆಕ್ರೋಶಗೊಂಡಿದ್ದಾರೆ. ಅಪಮಾನ ಮಾಡಿದವರಿಗೆ ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.