ಕರ್ನಾಟಕದಲ್ಲಿ ಯಾವುದೇ ಪರೀಕ್ಷೆ ಆದರೂ ಕನ್ನಡದಲ್ಲಿ ಇರಲಿ-ಸಿದ್ದರಾಮಯ್ಯ

ಕರ್ನಾಟಕದಲ್ಲಿ ಯಾವುದೇ ಪರೀಕ್ಷೆ ಆದರೂ ಕನ್ನಡದಲ್ಲಿ ಇರಲಿ. ಕನ್ನಡಕ್ಕೆ ಆದ್ಯತೆ ನೀಡದಿದ್ದರೆ ಅದು ಕನ್ನಡಿಗರಿಗೆ ಅನ್ಯಾಯ ಮಾಡಿದಂತೆ ಎಂದು ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.

ಕನ್ನಡದಲ್ಲೇ ಮಾಡಬೇಕು ಕನ್ನಡಪರ ಸಂಘಟನೆಗಳು ಧ್ವನಿ ಎತ್ತಬೇಕು. ಅಮಿತ್ ಶಾಗೆ ಬುದ್ದಿ ಕಡಿಮೆ. ಹಿಂದಿ ರಾಷ್ಟ್ರ ಭಾಷೆ ಅಲ್ಲ. ದೇಶದ ಎಲ್ಲಾ ಭಾಷೆಗಳಂತೆ ಹಿಂದಿ ಸಹಾ ಒಂದು. ಹಿಂದಿ ಸಾರ್ವಭೌಮ ಭಾಷೆ ಅಲ್ಲ. ಬಲತ್ಕಾರವಾಗಿ ಯಾವ ಭಾಷೆಯನ್ನು ಹೇರಬಾರದು. ಯಾವ ಭಾಷೆ ಕಲಿಯಲು ನಮ್ಮ ಅಭ್ಯಂತರ ಇಲ್ಲ. ಈಶ್ವರಪ್ಪಗೆ ಪ್ರತಿಕ್ರಿಯೆ ನೀಡುವುದನ್ನು ಬಿಟ್ಟಿದ್ದೀನಿ.

ನೆರೆ ಸಂತ್ರಸ್ತರಿಗೆ ಕೆಲವೇ ದಿನಗಳಲ್ಲಿ ಸಿಹಿ ಸುದ್ದಿ ವಿಚಾರಕ್ಕೆ ಮಾತನಾಡಿದ ಸಿದ್ದಯಾಮಯ್ಯ ಅವರು, ಅವರೇನು ಧರ್ಮಕ್ಕೆ ಕೊಡುತ್ತಾರಾ ? ಅದೇನು ಸಿಹಿ ಕೊಡೋದು‌ ಅದು ಅವರ ಕರ್ತವ್ಯ‌‌ 45 ದಿನದಿಂದ ಕೊಟ್ಟಿಲ್ಲದೇ ಇರುವುದನ್ನು ನಾವೇನು ಹೇಳಬೇಕು. ರಾಜ್ಯ ಸರ್ಕಾರದ ಸಿಹಿ ಸುದ್ದಿ ಬಗ್ಗೆ ಸಿದ್ದು ವ್ಯಂಗ್ಯವಾಡಿದ್ದಾರೆ.

ಜಿ‌.ಟಿ ದೇವೇಗೌಡ ಬಿಜೆಪಿ ಜೊತೆ ಹೋಗಲು ಕುಮಾರಸ್ವಾಮಿ ಹೇಳಿದ್ದರು ಹೇಳಿಕೆ ವಿಚಾರ. ಜಿ.ಟಿ ದೇವೇಗೌಡರು ಸತ್ಯ ಹೇಳಿರಬೇಕು ನನಗೆ ಗೊತ್ತಿಲ್ಲ. ಜೆಡಿಎಸ್ ಶಾಸಕರಿಂದ ಸ್ವಪಕ್ಷದ ಬಗ್ಗೆ ಟೀಕೆ ವಿಚಾರ ನಾವು ಹೇಳಿದರೆ ಬಣ್ಣ ಕಟ್ಟಿದರು ಅಂತಾರೆ. ಅವರೇ ಹೇಳಿದರೆ ಜನರಿಗೆ ಸತ್ಯ ಯಾವುದು ಗೊತ್ತಾಗುತ್ತದೆ. ನಾನು ಜೆಡಿಎಸ್ ಪಕ್ಷ ಬಿಟ್ಟವನಲ್ಲ. ಅವರು ನನ್ನನ್ನು ತೆಗೆದು ಹಾಕಿದರು. ಮತ್ತೊಮ್ಮೆ ಜೆಡಿಎಸ್ ಪಕ್ಷ ತೊರೆದ ಬಗ್ಗೆ ಸ್ಪಷ್ಟನೆ ನೀಡಿದ ಸಿದ್ದು. ಹುಣಸೂರು ಉಪ ಚುನಾವಣೆ ವಿಚಾರ. ಜಿ.ಟಿ ದೇವೇಗೌಡರೇ ಹೇಳಿದ್ದಾರೆ ಕಾಂಗ್ರೆಸ್ ಗೆಲ್ಲುತ್ತೆ ಅಂತಾ. ಬಹುಶಃ ಅವರು ಸತ್ಯ ಹೇಳಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.