ಐತಿಹಾಸಿಕ ಅಯೋಧ್ಯೆ ತೀರ್ಪು ಕುರಿತು ಚಿಂತಕ ಶಿವಸುಂದರ್ ಕವನ…

ಆಹಾ! ಈಗ ಎಲ್ಲಾ ಸರಿಹೊಯಿತು..
ಮಂದಿರಕ್ಕೆ ಜಾಗವಾಯಿತು
ನ್ಯಾಯಕ್ಕೂಐದು ಎಕರೆ ಪರಿಹಾರ ಸಿಕ್ಕಿತು …
ಸರ್ವೇ ಜನಾ ಸುಖೀನೋ ಭವಂತು!

ಅವರಿರುವುದು ಹಾಗೆ! ಕೇಳುತ್ತಾರೆ
ಕೊಡದಿದ್ದರೆ ಕೊಲ್ಲುತ್ತಾರೆ
ನಿಮಗೇನಾಗಿದೆ ಧಾಡಿ?
ಕೇಳಿದ್ದನ್ನು ಕೊಟ್ಟು ಶಾಂತಿ ಕಾಪಾಡಿ….

ಇನ್ನು ಚಿಂತೆ ಇಲ್ಲ,
ಸತ್ಯಕ್ಕೀಗ ಸಾಕ್ಷಿ ಪುರಾವೆಗಳ ಕಾವಲಿಲ್ಲ.
ಸತ್ಯಾಪಹರಣ ಈಗ ತುಂಬಾ ಸಲೀಸು,
ಕಾಯುವ ಲಕ್ಷಣ ರೇಖೆ ಮೊದಲಿಗಿಂತ ಮಸುಕು…

ಇನ್ನೂ ನಂಬಿಕೆಯೇ ಸಂವಿಧಾನ,ರಣ ಘೋಷಗಳೇ ವೇದವಾಕ್ಯ
ನಂಬಿಕೆಯಂತೆ ನಡೆದರೆ ಮೋಕ್ಷ,ಇಲ್ಲವೇ ನಿಜ ನಿರ್ವಾಣ..
ಪುರಾಣ ಮಂತ್ರ ತಂತ್ರ ಕವಡೆ
ಜನಸಂಖ್ಯೆಗೆ ಅನುಗುಣವಾಗಿ ನ್ಯಾಯದ ಬಟವಾಡೆ….

ರಾಮರಾಜ್ಯ ಸ್ವಾಮಿ…
ಶಂಬೂಕರಾದರೆ ನರಕ
ಸಹಿಸಿಕೊಂಡು ಬಾಳಿ…. ಸ್ವರ್ಗಸುಖ!

-ಶಿವಸುಂದರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.