ಏನೂ ತಿಳಿಯದ ಮುಗ್ದ ಮಕ್ಕಳು ಅಗ್ನಿಗಾಹುತಿ : ಡೇ ಕೇರ್ ಸೆಂಟರ್ ನಲ್ಲಿ ಬೆಂಕಿ

ಪೆನ್ಸಿಲ್ವೇನಿಯಾದಲ್ಲಿ ಮನಕಲಕುವ ಘಟನೆ ನಡೆದಿದೆ. ಏನೂ ತಿಳಿಯದ ಮುಗ್ದ ಮಕ್ಕಳು ಅಗ್ನಿಗಾಹುತಿಯಾಗಿದ್ದಾರೆ. ಇಲ್ಲಿನ ಡೇ ಕೇರ್ ಸೆಂಟರ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ, ಐದು ಮಕ್ಕಳು ಸಾವನ್ನಪ್ಪಿವೆ.

ಸಾವನ್ನಪ್ಪಿದ ಮಕ್ಕಳ ವಯಸ್ಸು 7 ತಿಂಗಳಿಂದ 5 ವರ್ಷದೊಳಗಿದೆ ಎಂದು ಪೊಲೀಸರು ಹೇಳಿದ್ದಾರೆ. ಡೇ ಕೇರ್ ಸೆಂಟರ್ ನೋಡಿಕೊಳ್ತಿದ್ದವರೂ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಘಟನೆ ಭಾನುವಾರ ರಾತ್ರಿ ನಡೆದಿದೆ. ಮೊದಲ ಮಹಡಿಯ ಕಿಟಕಿಯಿಂದ ಹೊಗೆ ಹೊರಗೆ ಬರ್ತಿತ್ತಂತೆ.

ಮೃತ ಮಕ್ಕಳ ಪಾಲಕರು ರಾತ್ರಿ ಕೆಲಸಕ್ಕೆ ಹೋಗ್ತಿದ್ದರು ಎನ್ನಲಾಗಿದೆ. ಹಾಗಾಗಿ ಮಕ್ಕಳನ್ನು ಡೇ ಕೇರ್ ಸೆಂಟರ್ ನಲ್ಲಿ ಬಿಟ್ಟು ಹೋಗ್ತಿದ್ದರು. ಪ್ರಕರಣ ದಾಖಲಿಸಿಕೊಂಡ ಸ್ಥಳೀಯ ಪೊಲೀಸರು ಘಟನೆಗೆ ಕಾರಣ ಹುಡುಕುತ್ತಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.