ಎರಡೂವರೆ ವರ್ಷದ ಮಗು ಮೇಲೆ ಯುವನಕನಿಂದ ಅತ್ಯಾಚಾರ….

ಕಾಮುಕರ ಕಣ್ಣಿಗೆ ವಯಸ್ಸು ಕಾಣುತ್ತಿಲ್ಲ. ಹಿರಿಯರು-ಕಿರಿಯರು-ಮಕ್ಕಳು ಎನ್ನದೆ ಕಾಮದ ಬಲೆಗೆ ಬೀಳಿಸುವ ಕೃತ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂದು ಮಂಡ್ಯಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. ನೀವು ಕೇಳಿದ್ರೆ ಅದ್ಯಾವ ರೀತಿ ಶಾಪಾ ಹಾಕ್ತೀರೋ ಗೊತ್ತಿಲ್ಲ.

ಹೌದು.. ಮಂಡ್ಯದಲ್ಲಿ ಎರಡೂವರೆ ವರ್ಷದ ಮಗು ಮೇಲೆ ಯುವನಕನಿಂದ ಅತ್ಯಾಚಾರ ನಡೆದಿದೆ. ಪರಿಚಯಸ್ಥ 18 ವರ್ಷದ ಯುವಕನಿಂದಲೇ ಅತ್ಯಾಚಾರ ಮಾಡಲಾಗಿದೆ. ಮಗುವಿನ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬೆಳ್ಳೂರು ಠಾಣೆಗೆ ಭೇಟಿ ನೀಡಿರೊ ಎಸ್ ಪಿ ಪರಶುರಾಮ್‌ ವಿಚಾರಣೆ ನಡೆಸಿದ್ದಾರೆ.

ಸದ್ಯ ಅತ್ಯಾಚಾರಿ ತಪ್ಪಿಸಿಕೊಂಡಿದ್ದು, ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸರು ವಿಚಾರಣೆ ಚುರುಕುಗೊಳಿಸಿದ್ದಾರೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.