ಎಚ್.ಡಿ. ಕುಮಾರಸ್ವಾಮಿ ಸಮ್ಮುಖದಲ್ಲೇ ಜೆಡಿಎಸ್ ನ ಇಬ್ಬರು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ…

ಇಂದು ಜೆಡಿಎಸ್ ನಿಂದ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ತೆರಳಿ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಎಚ್.ಡಿಕೆ ಸಮ್ಮುಖದಲ್ಲೇ ಜೆಡಿಎಸ್ ನಿಂದ ಕೆ.ಪಿ ಬಚ್ಚೇಗೌಡ ಹಾಗೂ ರಾಧಾಕೃಷ್ಣ ಇಬ್ಬರು ಒಟ್ಟಿಗೆ ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ ನಿಂದ ಅಭ್ಯರ್ಥಿ ಆಯ್ಕೆ ಹಿನ್ನೆಲೆಯಲ್ಲಿ ಗೊಂದಲ ಸೃಷ್ಠಿಯಾಗಿದ್ದು, ವರಿಷ್ಟರ ೀ ನಡೆ ಕುತೂಹಲ ಮೂಡಿಸಿದೆ. ಇನ್ನು ಜೆಡಿಎಸ್ ನಿಂದ ನೀಡಲಾಗಿದ್ದ ಬಿಫಾರ್ಮ್ ನಲ್ಲಿ ಕೆ.ಪಿ ಬಚ್ಚೇಗೌಡ ಹಾಗೂ ರಾಧಾಕೃಷ್ಣ ಅವರಿಬ್ಬರೂ ಹೆಸರು ಇತ್ತೆಂದು ಹೇಳಲಾಗಿದೆ.

ಈ ಮೊದಲು ಜೆಡಿಎಸ್ ನಿಂದ ಚಿಕ್ಕಬಳ್ಳಾಪುರದ ಜೆಡಿಎಸ್ ಅಭ್ಯರ್ಥಿಯಾಗಿ ಕೆ.ಪಿ ಬಚ್ಚೇಗೌಡ ಅವರ ಹೆಸರನ್ನು ಘೋಷಿಸಲಾಗಿತ್ತು. ಆದರೆ ಇಂದು ಇಬ್ಬರೂ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿರುವುದು ಗೊಂದಲಕ್ಕೆ ಕಾರಣವಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.