ಉಲ್ಟಾ ಹೊಡೆದ ಪವಾರ್: ರಾಷ್ಟ್ರಪತಿ ಆಡಳಿತದ ಕಡೆ ಹೊರಳುತ್ತಿರುವ ಮಹಾರಾಷ್ಟ್ರ….

ಫಲಿತಾಂಶ ಬಂದು 12 ದಿನಗಳು ಉರುಳಿದರೂ ಇನ್ನೂ ಮಹಾರಾಷ್ಟ್ರದಲ್ಲಿ ನೂತನ ಸರಕಾರ ರಚನೆಯ ಸರ್ಕಸ್‌ ಅಂತ್ಯ ಕಂಡಿಲ್ಲ. ಅಲ್ಲದೇ ಸದ್ಯಕ್ಕೆ ಅದು ಅಂತ್ಯ ಕಾಣುವ ಲಕ್ಷಣಗಳೂ ಗೋಚರಿಸುತ್ತಿಲ್ಲ.

ಬಿಜೆಪಿಗೆ ಸಡ್ಡು ಹೊಡೆದು ನಿಂತಿರುವ ಶಿವಸೇನೆಯ ಜೊತೆ ಕೈಜೋಡಿಸಿ ಕಾಂಗ್ರೆಸ್ ಮತ್ತು ಪಕ್ಷೇತರರ ಬೆಂಬಲದೊಂದಿಗೆ ಎನ್‌ಸಿಪಿ ಸರಕಾರ ರಚನೆಗೆ ಪ್ರಯತ್ನ ಪಡಬಹುದು ಎಂಬ ಊಹಾಪೋಹಗಳಿಗೆ ಖುದ್ದು ಗಡಿಯಾರದ ಪಕ್ಷದ ಅಧ್ಯಕ್ಷ ಶರದ್ ಪವಾರ್ ತೆರೆ ಎಳೆದಿದ್ದಾರೆ.

ಶಿವಸೇನೆ ಜೊತೆ ಸೇರಿ ಸರಕಾರ ರಚಿಸವು ಯಾವುದೇ ಇರಾದೆ ಎನ್‌ಸಿಪಿಗಿಲ್ಲ ಎಂದು ಮಾಜಿ ಸಿಎಂ ಸಹ ಆಗಿರುವ ಹಿರಿಯ ಮುತ್ಸದ್ದಿ ಶರದ್ ಪವಾರ್‍ ಬುಧವಾರ ಘೋಷಿಸಿದರು. ಅಲ್ಲದೇ ನಾವು (ಎನ್‌ಸಿಪಿ-ಕಾಂಗ್ರೆಸ್) ಪ್ರತಿಪಕ್ಷದಲ್ಲಿ ಕೂರಲು ಸಿದ್ಧರಿದ್ದೇವೆ ಎಂದಿದ್ದಾರೆ.

ಬಿಜೆಪಿ ಮತ್ತು ಶಿವಸೇನೆ ನಡುವೆ ದಶಕಗಳಿಮದ ಮೈತ್ರಿ ಇದೆ. ಈಗ ಆ ಮೈತ್ರಿ ಮುರಿದು ಹೊಗುತ್ತದೆ ಎನ್ನಲಾಗದು. ನಾಳೆ ಎರಡೂ ಪಕ್ಷಗಳು ತಮ್ಮ ಭಿನ್ನಾಭಿಪ್ರಾಯ ಮರೆಯಬಹುದು. ಹಾಗಾಗಿ ಅವರ ಜೊತೆ ಸೇರಿ ಸರಕಾರ ರಚಿಸುವ ಮಾತೇ ಇಲ್ಲ ಎಂದು ಪವಾರ್‍ ಹೇಳಿದ್ದಾರೆ.

ಶರದ ಪವಾರ್‍ ಅವರ ಈ ಹೇಳಿಕೆ ಹಿನ್ನೆಲೆಯಲ್ಲಿ ಶಿವಸೇನೆ ಸಹ ಬಿಜೆಪಿ ಮೇಲೆ ಸಿಎಂ ಹುದ್ದೆಗಾಗಿ ಒತ್ತಡ ತೀವ್ರಗೊಳಸಿದೆ. ಇನ್ನೆರಡು ದಿನದಲ್ಲಿ ಸರಕಾರ ರಚನೆ ಆಗದಿದ್ದಲ್ಲಿ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಅನಿವಾರ್‍ಯವಾಗುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.