ಉಪ್ಪು ಆಹಾರದ ರುಚಿ ಮಾತ್ರವಲ್ಲದೇ ಕೂದಲ ಆರೋಗ್ಯ ವೃದ್ಧಿಸುತ್ತೆ….

ಉಪ್ಪಿಗಿಂತ ರುಚಿ ಬೇರೆ ಇಲ್ಲ. ಹೌದು.. ಈ ಮಾತನ್ನ ನಾವೆಲ್ಲರೂ ಒಪ್ಪಲೇಬೇಕು. ಯಾಕೆಂದ್ರೆ ಆಹಾರದಲ್ಲಿ ಉಪ್ಪು ತುಂಬಾನೇ ಪ್ರಾಮುಖ್ಯತೆ ಪಡೆದುಕೊಂಡಿದೆ. ಉಪ್ಪು ಇದ್ರನೇ ಆಹಾರ ಸ್ವಾದ ಪಡೆದುಕೊಳ್ಳೋದು. ಆದರೆ ಉಪ್ಪಿನ ಪ್ರಯೋಜನ ಇಲ್ಲಿಗೆ ನಿಲ್ಲೋದಿಲ್ಲ. ಯಾಕೆಂದ್ರೆ ಉಪ್ಪು ಆಹಾರದ ರುಚಿ ಮಾತ್ರವಲ್ಲದೇ ಕೂದಲ ಆರೋಗ್ಯ ಹೆಚ್ಚಿಸುತ್ತದೆ.

ಹಾಗಾದ್ರೆ ಉಪ್ಪನ್ನ ಕೂದಲಿಗೆ ಹೇಗೆ ಬಳಕೆ ಮಾಡಬಹುದು ಅನ್ನೋದರ ವಿವರ ಇಲ್ಲಿದೆ ನೋಡಿ.

ತಲೆಹೊಟ್ಟು ನಿವಾರಿಸಿ : ಉಪ್ಪು ಸಿಂಪಡಿಸಿ ನಿಧಾನವಾಗಿ ಮಸಾಜ್ ಮಾಡಿ ಬಳಿಕ ಸ್ನಾನ ಮಾಡಿದರೆ ತಲೆಹೊಟ್ಟು ಕ್ರಮೇಣ ಕಡಿಮೆಯಾಘುತ್ತದೆ.

ದಟ್ಟವಾದ ಕೇಶರಾಶಿ ನಿಮ್ಮದಾಗಿಸುತ್ತೆ : ಶಾಂಪುವಿನೊಂದಿಗೆ ಉಪ್ಪು ಬೆರೆಸಿ ಸ್ನಾನ ಮಾಡಿದರೆ ಕೂದಲು ಬೆಳೆಯಲು ಇದು ಪೂರಕವಾಗುತ್ತದೆ.

ಕೂದಲ ಬೆಳವಣಿಗೆಗೆ ಸಹಾಯಕ : ಮುಚ್ಚಿದ್ದ ರಂಧ್ರಗಳನ್ನು ತೆರೆದು ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ ಉಪ್ಪು.

ಕೂದಲು ಜಿಡ್ಡುಗಟ್ಟುವುದನ್ನ ತಡೆಯುತ್ತದೆ : ಕೂದಲ ಎಣ್ಣೆ ಅಂಶವನ್ನು ಉಪ್ಪು ನಿವಾರಣೆ ಮಾಡುತ್ತದೆ. ಇದರಿಂದ  ಕೂದಲು ಸುಧಾರಿಸುತ್ತದೆ.

ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ : ಇದು ಕೂಡ ಕೂದಲ ಬೆಳವಣಿಗೆಗೆ ಸಹಕಾರಿಯಾಗಿದೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.