ಉಕ್ಕಿ ಹರಿಯುತ್ತಿರೋ ಮಲಪ್ರಭಾ ನದಿ : ಪ್ರವಾಹ ಮಧ್ಯೆ ಸಿಲುಕಿದ್ದ ಬೈಕ್, ಇಬ್ಬರು ಸವಾರರ ರಕ್ಷಣೆ

ಉಕ್ಕಿ ಹರಿಯುತ್ತಿರೋ ಮಲಪ್ರಭಾ ನದಿ ಪ್ರವಾಹ ಮಧ್ಯೆ ಸಿಲುಕಿದ್ದ ಬೈಕ್ ಮತ್ತು ಇಬ್ಬರು ಸವಾರರನ್ನು ರಕ್ಷಣೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗೋವನಕೊಪ್ಪ ಸೇತುವೆ ಬಳಿ ನಡೆದಿದೆ.

ಹರಿಯುತ್ತಿರೋ ನದಿ ಪ್ರವಾಹದ ಮಧ್ಯೆ ಜೀವದ ಹಂಗಿಲ್ಲದೆ ಜೆಸಿಬಿ ಮೂಲಕ ಬೈಕ್ ಮತ್ತು ಸವಾರರನ್ನು ಸಹ ಯುವಕರು ರಕ್ಷಣೆ ಮಾಡಿದ್ದಾರೆ. ಪ್ರವಾಹದ ನೀರಿನ ಮಧ್ಯೆ ಕುಳಗೇರಿಯಿಂದ ಕೊಣ್ಣೂರ ಕಡೆಗೆ ಯುವಕರು ತೆರಳುತ್ತಿದ್ದರು.

ಹುಬ್ಬಳ್ಳಿ ಸೋಲ್ಹಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿರೋ ಗೋವಿನಕೊಪ್ಪ ಸೇತುವೆ ಮೇಲಿನ ನೀರಿನ ಹರಿವಿಗೆ ಜೆಸಿಬಿ ಮೂಲಕ ದಾರಿ ಮಾಡಲು ಗ್ರಾಮಸ್ಥರು ಮುಂದಾಗಿದ್ದರು. ಈ ವೇಳೇ ಯುವಕರನ್ನು ರಕ್ಷಣೆ ಮಾಡಲಾಗಿದೆ.

 

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.