ಇನ್ಫೋಸಿಸ್‌ನಲ್ಲಿ 10 ಸಾವಿರ ಉದ್ಯೋಗಿಗಳ ನೌಕರಿ ಕಟ್..ಮಧ್ಯಮ ಶ್ರೇಣಿ ಉದ್ಯೋಗಿಗಳು ಮನೆಗೆ

ದೇಶದ ಎರಡನೇ ಅತಿ ದೊಡ್ಡ ದತ್ತಾಂಶ ರಫ್ತು ಸಂಸ್ಥೆ ಇನ್ಫೋಸಿಸ್ 10 ಸಾವಿರ ಉದ್ಯೋಗಿಗಳನ್ನು ಮನೆಗಟ್ಟಲು ನಿರ್ಧರಿಸಿದೆ. ಆರ್ಥಿಕ ಶಿಸ್ತು (ವೆಚ್ಚ ಕಡಿತ) ಕಾಪಾಡುವ ನಿಟ್ಟಿನಲ್ಲಿ ಭಾರೀ ಸಂಖ್ಯೆಯಲ್ಲಿ ತನ್ನ ನೌಕರರನ್ನು ಮನೆಗೆ ಕಳುಹಿಸಲು ಇನ್ಫೋಸಿಸ್ ನಿರ್ಧರಿಸಿದೆ.
ನೌಕರರ ಸಂಬಳ ಸಾರಿಗೆ ವೆಚ್ಚ ಕಡಿತ ಮಾಡುವ ಉದ್ದೇಶದಿಂದ ತನ್ನ ಕಾರ್‍ಯಶಕ್ತಿಗೆ ಕತ್ತರಿ ಹಾಕುವ ಸಲುವಾಗಿ ಇನ್ಫೋಸಿಸ್ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಹಿರಿಯ ಮತ್ತು ಮಧ್ಯಮ ಶ್ರೇಣಿಯಲ್ಲಿ ಇರುವ ಉದ್ಯೋಗಿಗಳು ಮನೆ ದಾರಿ ಹಿಡಿಯಬೇಕಿದೆ.

ವೆಚ್ಚ ಕಡಿತದ ದೃಷ್ಟಿಯಿಂದ ತನ್ನ ಕಾರ್‍ಯಶಕ್ತಿಯನ್ನು ಶೇ. 10ರಷ್ಟು ಕಡಿತ ಮಾಡಲು ಇನ್ಫೋಸಿಸ್ ನಿರ್ಧರಿಸಿದೆ. ಹಿರಿಯ ನೌಕರರ (ವ್ಯವಸ್ಥಾಪಕರು) ಶ್ರೇಣಿಯಲ್ಲಿ ಸುಮಾರು 30 ಸಾವಿರ ಮಂದಿ ಕಾರ್‍ಯಾಚರಿಸುತ್ತಿದ್ದು, ಇದರಲ್ಲಿ ಸುಮಾರು 2500 ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ.

ಇದೇ ರೀತಿ ಮಧ್ಯಮ ಶ್ರೇಣಿಯಲ್ಲಿ ಸುಮಾರು 86 ಸಾವಿರ ಮಂದಿ ನೌಕರರಿದ್ದು, ಇವರ ಪೈಕಿ 4ರಿಂದ 7 ಸಾವಿರ ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇದಲ್ಲದೇ ಉನ್ನತ ಸ್ತರದಲ್ಲಿ, ಅಂದರೆ ಉಪಾಧ್ಯಕ್ಷರ ಮಟ್ಟದಲ್ಲಿಯೂ ಕಡಿತ ಆಗುತ್ತಿದ್ದು 50 ಮಂದಿಯ ನೌಕರಿಗೆ ಕಲ್ಲು ಬೀಳಲಿದೆ ಎಂದು ವರದಿಯಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.