ಇದೇ 22 ರಂದು ಗೌರಿ ಲಂಕೇಶ್ ರಾಷ್ಟ್ರೀಯ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ..

ಗೌರಿ ಲಂಕೇಶ್ ರಾಷ್ಟ್ರೀಯ ಪತ್ರಿಕೋದ್ಯಮ ಪ್ರಶಸ್ತಿ ಪ್ರಧಾನ ಮತ್ತು ಇಂಗ್ಲಿಷ್ ವೆಬ್ ಸೈಟ್ ಲೋಕಾರ್ಪಣೆ ಸಮಾರಂಭವನ್ನು ಇದೇ ತಿಂಗಳು 22 ರಂದು ಸಂಜೆ 4 ಗಂಟೆಗೆ  ಹಮ್ಮಿಕೊಳ್ಳಲಾಗಿದೆ.

ನೂತನ ಪುಸ್ತಕಗಳಾದ ಡಿ.ಉಮಾಪತಿ ಅವರ ‘ದೆಹಲಿ ನೋಟ’ ಮತ್ತು ವಿನಯಾ ಒಕ್ಕುಂದ ಅವರ ಕೃತಿ ‘ನೀರನಡೆ’ ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು.

ಈ ಸಮಾರಂಭದಲ್ಲಿ ಖ್ಯಾತ ಪತ್ರಕರ್ತರಾದ ರವೀಶ್ ಕುಮಾರ್  ಪ್ರಶಸ್ತಿ ಪುರಸ್ಕಾರ ಭಾಷಣ ಮಾಡಲಿದ್ದು, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಇನ್ನೂ ಕವಿತಾ ಲಂಕೇಶ್ ಅವರು ಇಂಗ್ಲಿಷ್ ವೆಬ್ ಸೈಟ್ ಲೋಕಾರ್ಪಣೆ ಮಾಡಲಿದ್ದು, ಇದೇ ವೇಳೆ ವಿಶೇಷ ಸಂಚಿಕೆ ಬಿಡಿಗಡೆ ಮಾಡಲಾಗುವುದು.

 

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.