ಆ ಒಂದು ಸೀರೆ ಆರೋಗ್ಯಕ್ಕೆ ತುಂಬಾ ಒಳ್ಳೆದು : ಯಾವುದಾ ಸೀರೆ…?

ಸೀರೆ ಉಟ್ಟಾಗ ಯಾರು ತಾನೆ ಚೆನ್ನಾಗಿ ಕಾಣೋದಿಲ್ಲ ಹೇಳಿ..? ಈಗಂತು ಸೀರೆಯಲ್ಲೇ ನಾನಾ ಫ್ಯಾಷನ್ ಮಾಡೋದು ರೂಢಿಸಿಕೊಂಡು ಬಿಟ್ಟಿದ್ದಾರೆ ಮಹಿಳೆಯರು.

ಹೌದು.. ಸೀರೆ ನಮ್ಮ ಸಾಂಪ್ರದಾಯಿಕ ಉಡುಗೆ. ಸೀರೆ ಬಳಸಿ ಹಲವಾರು ಅಲ್ಟ್ರಾ ಮಾಡೆಲ್  ಲುಕ್ ನಲ್ಲಿ ಕಾಣಿಸಿಕೊಳ್ಳಲಾಗುತ್ತದೆ. ಸೀರೆಯಲ್ಲೂ ನಾನಾ ಫ್ಯಾಷನ್ ಮಾಡಲಾಗುತ್ತದೆ. ಆದರೆ ಹೀಗೊಂದು ಸೀರೆ ಫ್ಯಾಷನ್ ಗಾಗಿ ಹುಟ್ಟಿಕೊಂಡಿಲ್ಲ. ಬದಲಿಗೆ ಆರೋಗ್ಯ ಕಾಪಾಡುತ್ತದೆ. ಅದ್ಯಾವ ಸೀರೆ ಅಂತೀರಾ..? ಅದರ ಬಗ್ಗೆ ಡಿಟೇಲ್ಸ್ ಇಲ್ಲಿದೆ ನೋಡಿ.

ಆಯುರ್ವಸ್ತ್ರ ಎಂದು ಕರೆಸಿಕೊಳ್ಳುವ ಈ ಸೀರೆಯನ್ನು ಹತ್ತಿಯಿಂದ ತಯಾರಿಸಲಾಗುತ್ತದೆ. ತಯಾರಿಸುವಾಗ ಸಗಣಿ ಕೂಡ ಬಳಕೆ ಮಾಡಲಾಗುತ್ತದೆ. ನಂತರ ಈ ಸೀರೆಯನ್ನು 50 ವಿಧವಾದ ಗಿಡ ಮೂಲಿಕೆಗಳನ್ನು ಸಮ ಪ್ರಮಾಣದಲ್ಲಿ ಬಳಕೆ ಮಾಡಿ, ಗಂಟೆಗಟ್ಟಲೆ ಕುದಿಸಿ ತಯಾರಿಸಲಾಗುತ್ತದೆ.

ಇದರಲ್ಲಿ ನಾನಾ ಗಿಡ ಮೂಲಿಕೆಗಳ ಅಂಶ ಇರುವುದರಿಂದ ನಾನಾ ಚರ್ಮರೋಗವನ್ನು ನಿವಾರಿಸುತ್ತದೆ. ಆಯುರ್ವಸ್ತ್ರದ ವಿಧಗಳಾದ  ನೀಲ ವಸ್ತ್ರಂ, ಹಳದಿ ವಸ್ತ್ರಂ ಎಂದು ಕರೆಯಲ್ಪಡುವ ಈ ಉಡುಪು ನಾನಾ ಆರೋಗ್ಯಕರ ಪ್ರಯೋಜನಗಳನ್ನ ಹೊಂದಿದೆ.

ಸದ್ಯ ಈ ಸೀರೆ ಮಾರುಕಟ್ಟೆಗೆ ಹೆಜ್ಜೆ ಇಟ್ಟಿದ್ದು, ಭಾರೀ ಸದ್ದು ಮಾಡುತ್ತಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.