ಆರೋಗ್ಯಕರ ಅಕ್ಕಿ : ಮಧುಮೇಹ ಇರುವವರಿಗೆ ಈ ಅಕ್ಕಿ ಎಷ್ಟು ಉತ್ತಮ…?

ನಾವು ಸೇವಿಸುವ ಆಹಾರದಲ್ಲಿ ಅತೀ ಹೆಚ್ಚಾಗಿ ಸೇವನೆ ಮಾಡುವ ಆಹಾರ ಅಂದರೆ ಅದು ಅನ್ನ. ಅನ್ನವನ್ನ ಬಳಸಿ ಎಷ್ಟೋ ವಿಧವಾದ ರುಚಿಯಾದ ಆಹಾರವನ್ನ ತಯಾರಿ ಮಾಡಲಾಗುತ್ತೆ. ಹಾಗೇನೇ ಅನ್ನವನ್ನು ಮಾಡುವ ಅಕ್ಕಿಯಲ್ಲೇ ವಿವಿಧ ತೆರನಾದ ಅಕ್ಕಿ ಬಳಕೆ ಮಾಡುವವರಿದ್ದಾರೆ. ಈಗಿನ ಕಾಲದಲ್ಲಿ ಎಲ್ಲರೂ ಹೆಚ್ಚಾಗಿ ಬಳಕೆ ಮಾಡುವ ಆರೋಗ್ಯಕರ ಅಕ್ಕಿ ಎಂಥಲೇ ಕರಿಸಿಕೊಳ್ಳುವ ಅಕ್ಕಿ ಅಂದರೆ ಅದುವೇ ಕಂದು ಬಣ್ಣದ ಬಾಸುಮತಿ ಅಕ್ಕಿ. ಕೆಲ ವರ್ಷಗಳ ಹಿಂದೆ  ಈ ಅಕ್ಕಿಯನ್ನ ಕೆಲ ವರ್ಗದ ಜನ ಖರೀದಿಸುವುದು ಕಷ್ಟಕರವಾಗಿತ್ತು. ಆದರೆ ಸದ್ಯದ ಪರಿಸ್ಥಿತಿ ಹಾಗಿಲ್ಲ. ಬಹುತೇಕ ಜನ ಬಾಸುಮತಿ ಅಕ್ಕಿಯಿಂದಲೇ ಅನ್ನವನ್ನು ತಯಾರಿಸುತ್ತಾರೆ. ಯಾಕೆ ಗೊತ್ತಾ..? ಬಾಸುಮತಿಯಲ್ಲಿ ಅಕ್ಕಿಯಲ್ಲಿ ಅಂತ ವಿಶೇಷತೆ ಏನಿದೆ..? ಅನ್ನೋದನ್ನ ನೀವು ತಿಳಿದುಕೊಳ್ಳಲೇ ಬೇಕು.

1. ಬಾಸುಮತಿ ಕಂದು ಅಕ್ಕಿಯಲ್ಲಿ  ನಾರಿನಾಂಶ ಹೆಚ್ಚಾಗಿರುತ್ತದೆ. ಹೀಗಾಗಿ ಇದು ಜೀರ್ಣ ಕ್ರಿಯೆಗೆ ಸಹಕಾರಿಯಾಗಿದೆ. ಇದರ ಸೇವನೆಯಿಂದ ಕರುಳಿನ ಕ್ಯಾನ್ಸರ್ ನಿಂದ ದೂರವಿರಬಹುದು.

2. ಮಧುಮೇಹಿಗಳು ಅನ್ನ ಸೇವಿಸಿದರೆ ಸಕ್ಕರೆಯ ಪ್ರಮಾಣ ಹೆಚ್ಚಾಗುತ್ತೆ. ಆದರೆ ಬಾಸುಮತಿ ಅಕ್ಕಿಯಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗು ಸದ್ಯಾತೆ ಕಡಿಮೆ ಇರುತ್ತದೆ.

3. ಇದು ಜೀರ್ಣಾಂಗಗಳಿಗೆ ಹೆಚ್ಚು ಕೆಲಸ ಕೊಡುತ್ತದೆ. ಆಗಾಗ ತಿನ್ನುವುದನ್ನ ಕಡಿಮೆ ಮಾಡುತ್ತದೆ.

4. ನಿಸರ್ಗ ಕರೆ ಸುಲಭವಾಗಿರುತ್ತದೆ. ಮಲಬದ್ದತೆ ನಿವಾರಣೆ ಮಾಡುತ್ತದೆ.

5. ಇದರಲ್ಲಿ ಕೊಬ್ಬ, ಕೊಲಸ್ಟ್ರಾಲ್ ಇಲ್ಲವೇ ಇಲ್ಲ. ತೂಕ ಕಡಿಮೆ ಮಾಡಿಕೊಳ್ಳುವವರಿಗೆ ಈ ಅಕ್ಕಿ ಉತ್ತಮವಾಗಿದೆ.

6. ಇದು ಟಾಯಾಮಿನ್ , ನಿಯಾಸಿನ್ ಹೊಂದಿರುವುದರಿಂದ ಜೀರ್ಣಾಂಗವನ್ನು ಉತ್ತಮವಾಗಿಡುತ್ತದೆ ಮತ್ತು ಹೃದಯಕ್ಕೂ ಒಳ್ಳೆಯದು ಮಾಡಿ ರಕ್ತ ಹೀನತೆಯನ್ನು ಕಡಿಮೆಗೊಳಿಸುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.