ಆಯೋಧ್ಯೆ ತೀರ್ಪು ಸ್ವಾಗತಾರ್ಹ : ಮೋದಿ, ಶಾ, ಭಾಗವತ್ ಮಾರ್ಗದರ್ಶನದಲ್ಲೇ ದೇಶದ ನಡೆ – ಕೆ.ಎಸ್.ಈಶ್ವರಪ್ಪ

ಇವತ್ತು ಅಯೋಧ್ಯೆ ವಿವಾದದ ಜಾಗದ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಐತಿಹಾಸಿಕ ತೀರ್ಪು ಪ್ರಕಟವಾಗಿದೆ. ಪ್ರಜಾಪ್ರಭುತ್ವದಲ್ಲಿ ಸುಪ್ರೀಂ ಕೋರ್ಟ್ ನ ತೀರ್ಪನ್ನು ಎಲ್ಲರೂ ಸ್ವಾಗತಿಸಿದ್ದಾರೆ. ಅದೇ ರೀತಿ ನಾನು ಸ್ವಾಗತಿಸುತ್ತೇನೆ ಎಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಈ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಆರ್ ಎಸ್ ಎಸ್ ನ ಮೋಹನ್ ಜಿ ಭಾಗವತ್ ಅವರು ಯಾವ ಮಾರ್ಗದರ್ಶನದಲ್ಲಿ ದೇಶ ನಡೆಯಬೇಕು ಎಂದು ಹೇಳಿಕಗಳನ್ನು ನೀಡಲಿದ್ದಾರೆ. ಅವರ ಹೇಳಿಕೆಯಂತೆ ನಾವೆಲ್ಲರೂ ನಡೆಯುತ್ತೇವೆ ಎಂದು ಹೇಳಲು ಇಚ್ಚೆ ಪಡುತ್ತೇನೆ. ಅವರ ಮಾರ್ಗದರ್ಶನದಲ್ಲಿ ನಾವು ನಡೆಯುತ್ತೇವೆ ಎಂದರು.

ಶಿವಮೊಗ್ಗದ‌ ಕೋಟೆ ಸೀತಾರಾಮಾಂಜನಯ್ಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಈಶ್ವರಪ್ಪ ರಾಮ, ಹನುಮ ಜಪ ಮಾಡಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights