ಆಣೆ ಪ್ರಮಾಣಕ್ಕೆ ದೇವಸ್ಥಾನ ಬಳಕೆ ತಪ್ಪೆಂದ ಜೆಡಿಎಸ್ ಶಾಸಕ….

ಮಂಡ್ಯದ ನಾಗಮಂಗಲದ ಬೆಕ್ಕಳಲೆ ಗ್ರಾಮದಲ್ಲಿ ಜೆಡಿಎಸ್ ಶಾಸಕ ಸುರೇಶ್ ಗೌಡ ಆಣೆ ಪ್ರಮಾಣಕ್ಕೆ ದೇವಸ್ಥಾನ ಬಳಕೆ ತಪ್ಪೆಂದಿದ್ದಾರೆ.

ಪ್ರಸ್ತುತ ರಾಜಕಾರಣದಲ್ಲಿ ತಮ್ಮ ಪ್ರಾಮುಖ್ಯತೆ ಮೌಲ್ಯ ಕಳೆದುಕೊಳ್ತಿದ್ದಾರೆ. ವಾಡಿಕೆ ಮಾತು ಸತ್ಯವನ್ನು ದೇವರ ಮುಂದೆ ಬಂದು ಒಪ್ಪಿಕೊಂಡರೆ ಸತ್ಯ ಅಂತಾ ನಂಬ್ತೀವಿ. ಅದೇ ರೀತಿ ಇವ್ರು ಮಾಡಲು ಹೋಗಿದ್ದಾರೆ,ಆದ್ರೆ ಇವ್ರು ಇಷ್ಟರ ಮಟ್ಟಿಗೆ ಹೋಗಬಾರದಿತ್ತು.

ಒಂದು ಪವಿತ್ರವಾದ ಸ್ಥಳವನ್ನು ಇವ್ರು ಮಾಡಿರೋ ಯಾವುದೋ ಒಳ್ಳೆಯ ಕೆಟ್ಟ ಕೆಲಸಕ್ಕೆ ಬಳಸಿಕೊಂಡಿದ್ದು ತಪ್ಪು. ಇದಕ್ಕೆಲ್ಲ ಬೇಗನೇ ಇತೀಶ್ರೀ ಹಾಡುವುದು ಒಳಿತು. ಪ್ರತಿಯೊಬ್ಬರ ಹೃದಯದಲ್ಲೂ ದೆವರು ಇರ್ತಾನೆ ಅಲ್ಲೆ ಮುಟ್ಟಿ ಹೇಳಿದ್ರು ಆಗುತ್ತೆ.

ಭ್ರಷ್ಟಾಚಾರಕ್ಕೆ ಸಾಕ್ಷಿಗಳನ್ನು ಹುಡುಕಲು ಆಗುವುದಿಲ್ಲ,ಸಾಕ್ಷಿಗಳು ಸಿಕ್ಕಿದ್ರೆ ಸಿಕ್ಕಿ ಹಾಕೋತ್ತಾರೆ. ಇಬ್ಬರು ಈ ರೀತಿ ಆಡೋದು ಸರಿಯಲ್ಲ ಪರಿಸ್ಥಿತಿ ವಿಕೋಪಕ್ಕೆ ಹೋದ್ರೆ ಈ ರೀತಿ ಆಗುತ್ತೆ. ಸತ್ಯ ಎಲ್ಲಿರಿಗೂ ಗೊತ್ತು ಯಾಕೀಗೆ ಮಾಡ್ಕೋತ್ತಾರೆ, ಇಬ್ಬರು ಅರ್ಥ ಮಾಡಿಕೊಳ್ಳಬೇಕು.

ಇದೇ ವೇಳೆ ಕೆ.ಆರ್.ಪೇಟೆ ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರ ಮಾತನಾಡಿದ ಅವರು  ಈಗಾಗಲೇ ಪಕ್ಷದ ವರಿಷ್ಟರು ಸ್ಪಷ್ಟ ಪಡಿಸಿದ್ದಾರೆ ಸ್ಥಳೀಯರಿಗೆ ಟೀಕೇಟ್ ಎಂದು, ಹೀಗಾಗಿ ನಿಖಿಲ್ ಹೆಸ್ರು ಕೇಳಿ ಬಂದಿಲ್ಲ, ಸ್ಥಳೀಯರೇ ಅಭ್ಯರ್ಥಿ ಆಗಲಿದ್ದಾರೆ ಎಂದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.