ಆಕ್ಷನ್ ಪ್ರಿನ್ಸ್ ಕಾರು ಅಪಘಾತ : ಅಂದು ಬೆಳಗಿನ ಜಾವ ನಡೆದಿದ್ದೇನು..?

ಆಕ್ಷನ್ ಪ್ರಿನ್ಸ್ ಕಾರು ಅಪಘಾತವಾಗಿದ್ದು ವಿಚಾರ 5 ದಿನ ಕಳೆದ ಬಳಿಕ ಕೆಲ ಫೋಟೋಗಳು ಬೆಳಕಿಗೆ ಬಂದಿದೆ.

ಶೂಟಿಂಗ್ ಮುಗಿಸಿ ಬಳ್ಳಾರಿಯಿಂದ ಬೆಂಗಳೂರಿಗೆ ಮರಳುವಾಗ ಇದೇ ತಿಂಗಳೂ 23ನೇ ತಾರೀಖು ಬೆಳಗಿನ ಜಾವ ಸುಮಾರು ನಾಲ್ಕು ಗಂಟೆಗೆ ಘಟನೆ ನಡೆದಿತ್ತು. ಮಾರ್ಗ ಮಧ್ಯೆ ಅಪಘಾತಕ್ಕೀಡಾದ ಧ್ರುವ ಸರ್ಜಾ ಕಾರ್ ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಧ್ರುವ ಸರ್ಜಾ ಹಾಗೂ ಸ್ನೇಹಿತರೊಂದಿಗೆ ಪ್ರಯಾಣಿಸುತ್ತಿದ್ದ ಕಾರಿನ ಹಿಂಭಾಗ ನಜ್ಜುಗುಜ್ಜಾಗಿದ್ದು,  ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಪೊಗರು ರೋಮ್ಯಾಮಟಿಂಕ್ ಆಕ್ಷನ್ ಚಿತ್ರದ ರಶ್ಮಿಕಾ ಮಂದಣ್ಣ, ಶಾನ್ವಿ ಶ್ರವಾತ್ಸವ್ ನಟನೆಯ ಪೊಗರು ಸಿನಿಮಾ ಶೂಟಿಂಗ್ ಗಾಗಿ ಧ್ರುವ ಸರ್ಜಾ ಬಳ್ಳಾರಿಗೆ ತೆರಳಿದ್ದರು.

ನಂದಕಿಶೋರ್ ನಿರ್ಮಿಸಿರುವ ಪೊಗರು ಚಿತ್ರ, ಕನ್ನಡ ಸೇರೆದಂತೆ ಐದು ಭಾಷೆಗಳಲ್ಲಿ ಪೊಗರು ಚಿತ್ರೀಕರಣ ಮಾಡಲಾಗುತ್ತಿದೆ. ಐದು ಭಾಷೆಗಳಾದ ತಮಿಳು, ತೆಲುಗು, ಮಲೆಯಾಳಂ, ಹಿಂದಿಯಲ್ಲೂ ಚಿತ್ರ ಬಿಡುಗಡೆ ಮಾಡಲಾಗುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.