ಅರೆ ಬರೆ ಕಾಮಗಾರಿಗೆ ಬಾಲಕ ಬಲಿ : ಆಟವಾಡುವಾಗ ಜಾರಿ ಬಿದ್ದು ಬಾಲಕ ಸಾವು

ಅರೆ ಬರೆ ಕಾಮಗಾರಿಗೆ ಬಾಲಕ ಬಲಿಯಾದ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ದೇವರಭೂಪುರದ ಯುಕೆಪಿ ಕ್ಯಾಂಪ್ ನಲ್ಲಿ ನಡೆದಿದೆ.

ಅಮರೇಶ ತಂದೆ ತಿಪ್ಪಣ್ಣ (12) ಮೃತ ಬಾಲಕ. ಕಾಂಪೌಂಡ್ ಮೇಲೆ ಆಟವಾಡುವಾಗ ಬಾಲಕ ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಅರೆ ಬರೆ ನಿರ್ಮಾಣ ಮಾಡಿದ ಕಾಂಪೌಂಡ್ ಗೆ ಗೇಟ್ ಕೂಡಿಸಿರಲಿಲ್ಲ. ಕಂಪೌಂಡ್ ಮೇಲೆ ಆಟವಾಡಲು ಹೋದಾಗ ಬಾಲಕ ಗೇಟ್ ಮೇಲೆ ಬಿದ್ದಿದ್ದಾನೆ. ಕ್ಯಾಂಪ್ ಸುತ್ತಲೂ ಕೃಷ್ಣಾ ಜಲಭಾಗ್ಯ ನಿಗಮದಿಂದ ಕಂಪೌಂಡ್ ನಿರ್ಮಾಣ ಮಾಡಲಾಗ್ತಿತ್ತು.

ಅವೈಜ್ಞಾನಿಕ ಕಾಮಗಾರಿಗಾರಿಯೇ ಮಗುವನ್ನ ಬಲಿ ಪಡೆದಿದೆ ಅನ್ನೋ ಆರೋಪ ಕೇಳಿ ಬರುತ್ತಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.