ಅರಮನೆಯಲ್ಲಿ ರಾಜಮನೆತನದ ದಸರಾ ಹಿನ್ನೆಲೆ : ಪ್ರವೇಶ ನಿರ್ಬಂಧ

ಅರಮನೆಯಲ್ಲಿ ರಾಜಮನೆತನದ ದಸರಾ ಹಿನ್ನೆಲೆಯಲ್ಲಿ ಹಬ್ಬದ ಸಜ್ಜು ಬಲು ಜೋರಾಗೇ ನಡೆಯುತ್ತಿದೆ. ಆದರೆ ಸಾರ್ವಜನಿಕರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಇದೇನಿದು ನಾಡ ಹಬ್ಬಕ್ಕೆ ನಿರ್ಬಂಧ ಹೇರಲಾಗಿದಿಯಾ ಅಂತ ಗಾಬರಿಯಾಗಬೇಡಿ.

ಅದು ರಾಜ ಮನೆತನದವರ ಕಾರ್ಯಕ್ರಮದ ವೇಳೆ ಮಾತ್ರ ಅರಮನೆಗೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಅರಮನೆ ಆಡಳಿತ ಮಂಡಳಿ ಉಪನಿರ್ದೇಶಕ ಟಿ.ಎಸ್ ಸುಬ್ರಮಣ್ಯರಿಂದ ಮಾಹಿತಿ ನೀಡಿದ್ದಾರೆ. ಹಾಗಾದ್ರೆ ಯಾವ ಯಾವ ದಿನದಂದು ಅರಮನೆಗೆ ಪ್ರವೇಶ ನಿಷೇಧ ಮಾಡಲಾಗಿದೆ..? ಅನ್ನೋದರ ಮಾಹಿತಿ ಇಲ್ಲಿದೆ ನೋಡಿ..

24/09/2019 ಬೆ.10ರಿಂದ ಮ.1ರವರೆಗೆ ಅರಮನೆಯ ಒಳ ಹಾಗೂ ಹೊರಾವರಣಕ್ಕೆ ಪ್ರವೇಶ ನಿಷೇಧ.
29/09/2019 ಖಾಸಗಿ ದರ್ಬಾರ್ ಹಿನ್ನೆಲೆ ಬೆ.10 ರಿಂದ ಮ.2:30ರವರೆಗೆ ಅರಮನೆಯ ಒಳ ಹಾಗೂ ಹೊರಾವರಣಕ್ಕೆ ಪ್ರವೇಶ ನಿಷೇಧ.
07/10/2019 ಆಯುಧಪೂಜೆ ಹಿನ್ನೆಲೆ ಬೆ.10 ರಿಂದ ಮ.2:30ರವರೆಗೆ ಅರಮನೆಯ ಒಳ ಹಾಗೂ ಹೊರಾವರಣಕ್ಕೆ ಪ್ರವೇಶ ನಿಷೇಧ.
8/10/2019 ದಸರಾ ಜಂಬೂಸವಾರಿ ಮೆರವಣಿಗೆ ಹಿನ್ನೆಲೆ ಇಡೀ ದಿನ ಅರಮನೆಯ ಒಳ ಹಾಗೂ ಹೊರಾವರಣಕ್ಕೆ ಪ್ರವೇಶ ನಿಷೇಧ.
ಜಂಬೂಸವಾರಿ ದಿನ ಪಾಸ್ ಟಿಕೆಟ್ ಗೋಲ್ಡ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಅರಮನೆಗೆ ಪ್ರವೇಶ.
23/10/2019 ಸಿಂಹಾಸನ ವಿಸರ್ಜನೆ ಹಿನ್ನೆಲೆ ಬೆ.10 ರಿಂದ ಮ.1 ರವರೆಗೆ ಅರಮನೆಯ ಒಳ ಹಾಗೂ ಹೊರಾವರಣಕ್ಕೆ ಪ್ರವೇಶ ನಿಷೇಧ ಹೊರಡಿಸಲಾಗಿದೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.