ಅಯೋಧ್ಯೆ ತೀರ್ಪನ್ನು ಸ್ವಾಗತಿಸಿದ ಕೂಡಲ ಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ…

ಅಯೋಧ್ಯೆ ವಿವಾದ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಕೂಡಲ ಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸ್ವಾಗತಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಭಾರತ ಭಹುಭಾಷೆ, ಬಹುಧರ್ಮ, ಬಹುಸಂಸ್ಕೃತಿಯನ್ನು ಹೊಂದಿರುವ ರಾಷ್ಟ್ರ. ಇಂದು ಅಯೋಧ್ಯೆ ವಿವಾದ ಇತ್ಯರ್ಥವಾಗಿರುವುದು ಈ ಪ್ರಕರಣವನ್ನು ತಾರ್ಕಿಕವಾಗಿ ಅತ್ಯರ್ಥ ಪಡಿಸಿದಂತಾಗಿದೆ. ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ. ಎರಡು ಟ್ರಸ್ಟ್ ಗಳ ಮಧ್ಯದ ಈ ವಿವಾದ ಸುದೀರ್ಘವಾಗಿತ್ತು. ಈ ಸಮಸ್ಯೆಗೆ ಇಂದು ಸುಪ್ರೀಂ ಕೋರ್ಟ್ ತೀರ್ಪು ನೀಡುವ ಮೂಲಕ ಸೌಹಾರ್ಧತೆಯನ್ನು ಎತ್ತಿ ಹಿಡಿದಿದೆ. ಶ್ರೀರಾಮ ಭಕ್ತರ ಭಾವನೆಗಳನ್ನು ಇಲ್ಲಿ ಎತ್ತಿ ಹಿಡಿಯಲಾಗಿದೆ. ಈ ತೀರ್ಪನ್ನು ಎಲ್ಲರೂ ಸ್ವಾಗತಿಸಲೇಬೇಕು ಎಂದು ಹೇಳಿದರು.

ಈ ತೀರ್ಪನ್ನು ಸ್ವಾಗತಿಸುವಾಗ, ವಿಜೃಂಭಿಸುವವಾಗ ಮತ್ತೋಂದು ಧರ್ಮದ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡಬಾರದು. ಯಾರಿಗಾದರೂ ಈ ತೀರ್ಪು ಬೇಸರವಾಗಿದ್ದರೆ, ಮತ್ತೋಮ್ಮೆ ಅರ್ಜಿ ಸಲ್ಲಿಸುವ ಅವಕಾಶವಿದೆ. ಸುನ್ನಿ ಬೋರ್ಡ್ ಅವರ ಭಾವನೆಗಳನ್ನೂ ಗೌರವಿಸಲು ಸರ್ವ ಧರ್ಮ ಸಮಪಾಲು ಎಂಬಂತೆ 5 ಎಕರೆ ಜಮೀನು ನೀಡುವಂತೆ ಸುಪ್ರಿಂ ಕೋರ್ಟ್ ತೀರ್ಪು ನೀಡಿದೆ. ಬುದ್ಧ ಬಸವ, ಅಂಬೇಡ್ಕರ್ ತತ್ವಗಳಿಗೆ ಪೂರಕವಾದ ತೀರ್ಪು ಇದಾಗಿದೆ ಎಂದು ಅವರು ಹೇಳಿದರು.
ಕೆಲವರು ಈ ತೀರ್ಪನ್ನು ಒಪ್ಪಬಹುದು ಅಥವಾ ಬಿಡಬಹುದು, ಇದನ್ನು ಸೌಹಾರ್ಧಯುತವಾಗಿ ಬಗೆಹರಿಸಿಕೊಳ್ಳಲು ಮತ್ತೋಮ್ಮೆ ಮನವಿ ಸಲ್ಲಿಸಲು ಅವಕಾಶವಿದೆ. ಆದರೆ, ಆ ಬೇಸರವನ್ನು ಪ್ರಚೋದನೆಕಾರಿ ಮಾತುಗಳ ಮೂಲಕವಾಗಿ, ಭಾರತೀಯ ಸೌಹಾರ್ಧತೆಯನ್ನು ಹಾಳು ಮಾಡುವ ಪ್ರಯತ್ನವನ್ನು ಎರಡೂ ಗುಂಪಿನವರು ಮಾಡಬಾರದು. ಈ ತೀರ್ಪಿನ ಮುಖ್ಯಾಂಖಶಗಳನ್ನು ಮಾತ್ರ ಗಮನಿಸಿದ್ದೇನೆ. ಸಂಪೂರ್ಣವಾದ ತೀರ್ಪಿನ ಪ್ರತಿ ಸಿಕ್ಕ ಮೇಲೆ ಈ ಬಗ್ಗೆ ಚರ್ಚೆ ನಡೆಸಬೇಕು.

ಈ ತೀರ್ಪಿನ ಬಗ್ಗೆ ದೇಶದ ಜನ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚಿಸುವಾಗ ಶತಮಾನದಷ್ಟು ಹಳೆಯದಾದ ಸಮಸ್ಯೆ ಬಗೆಹರಿದಿರುವುದನ್ನು ಸೌಹಾರ್ಧಯುತವಾಗಿ ಭಾವನೆ ಹಂಚಿಕೊಳ್ಳಬೇಕು. ನ್ಯಾಯಾಲಯದಲ್ಲಿ ಪರ ಮತ್ತು ವಿರೋಧ ಬರಬಹುದು. ಆದರೆ, ಅದನ್ನು ಸೌಹಾರ್ಧಯುತವಾಗಿ ಬಗೆಹರಿಸಿಕೊಳ್ಳಬೇಕು. ಅದನ್ನು ವಿವಾದ ಮಾಡುವ ಬದಲು ಸೌಹಾರ್ಧಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಮೊದಲ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights