ಅಮಿತ್ ಶಾ ಗೆ ಸಿದ್ಧರಾಮಯ್ಯ ದಡ್ಡ ಎಂದು ಕರೆದಿರುವುದಕ್ಕೆ ಈಶ್ವರಪ್ಪ ಆಕ್ರೋಶ….!

ಕೇಂದ್ರ ಸಚಿವ ಅಮಿತ್ ಶಾ ಗೆ ಸಿದ್ಧರಾಮಯ್ಯ ದಡ್ಡ ಎಂದು ಕರೆದಿರುವುದಕ್ಕೆ ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ಧರಾಮಯ್ಯಗೆ ದಡ್ಡ, ವಡ್ಡ ಎಂದು ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯಗೆ ತಲೆ ಇದ್ದಿದ್ರೆ ಇಲ್ಲ ಸಲ್ಲದ ಹೇಳಿಕೆ ಕೊಡ್ತಿರಲಿಲ್ಲ. ಒಂದು ದೇಶ, ಒಂದು ಭಾಷೆ ನಿಟ್ಟಿನಲ್ಲಿ, ದೇಶದಲ್ಲಿ ರಾಷ್ಟೀಯ ಭಾಷೆಯಾಗಿರು ಹಿಂದಿಯನ್ನು ಪರಿಗಣಿಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದ್ದಾರೆ. ಇದಕ್ಕೆ ಮಾಜಿ ಸಿ.ಎಂ. ಸಿದ್ಧರಾಮಯ್ಯ, ಅಮಿತ್ ಶಾ ದಡ್ಡ ಎಂದು ಸಂಭೋಧಿಸಿದ್ದರು. ಸಿದ್ದರಾಮಯ್ಯಗೆ ತಿರುಗೇಟು ನೀಡುವ ಭರದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಸಿದ್ದರಾಮಯ್ಯಗೆ ವಡ್ಡ, ದಡ್ಡ ಎಂದು ಟೀಕೆ ಮಾಡಿದ್ದಾರೆ.

ತಕ್ಷಣವೇ ವಡ್ಡ ಎಂದು ಕರೆದಿರುವ ಬಗ್ಗೆ ಎಚ್ಚೆತ್ತುಕೊಂಡ ಸಚಿವ ಈಶ್ವರಪ್ಪ, ಸಿದ್ದರಾಮಯ್ಯರವನ್ನ ವಡ್ಡ ಎಂದು ಕರೆದಿರುವ ಬಗ್ಗೆ ವಿವಾದ ಸೃಷ್ಠಿಸಬೇಡಿ. ವಡ್ಡರ ಬಗ್ಗೆ ನನಗೆ ಕಾಳಜಿ ಇದೆ. ವಡ್ಡ ಎಂದಿರುವುದು ಸಿದ್ದರಾಮಯ್ಯನವರ ವರ್ತನೆಗೆ ಎಂದು ಹೇಳಿಕೆ ತಿರುಚಿದರು. ವಡ್ಡರು ಶ್ರಮ ಜೀವಿಗಳು ಅವರ ಬಗ್ಗೆ ಅಪಾರ ಗೌರವವಿದೆ ಎಂದು ಸಮಜಾಯಿಷಿ ನೀಡಿದರು. ಸಿದ್ಧರಾಮಯ್ಯ, ಅಮಿತ್ ಶಾ ದಡ್ಡ ಎಂದು ನೀಡಿರುವ ಹೇಳಿಕೆ ವಾಪಸ್ ಪಡೆಯಬೇಕು ಮತ್ತು ಕ್ಷಮೆ ಕೋರಬೇಕು‌‌ ಎಂದು ಆಗ್ರಹಿಸಿದರು.

ಅಮಿತ್ ಶಾ ಅವರು, ಹಿಂದಿ ಹೇರಿಕೆ ಮಾಡುತ್ತಿಲ್ಲ. ಹಿಂದಿ ಭಾಷೆ, ದೇಶವನ್ನ ಒಂದು ಮಾಡುವ ಭಾಷೆ, ಆದರೆ ಮೊದಲ ಆದ್ಯತೆ ಕನ್ನಡ ಎಂದು ಪ್ರತಿಕ್ರಿಯೆ ನೀಡಿದರು. ನಮ್ಮ ತಾಯಿ ಸ್ವರೂಪ ಕನ್ನಡ. ಮಾತೃ ಭಾಷೆ ಕನ್ನಡ. ಕನ್ನಡಕ್ಕೆ ಒಂದು‌ ಚೂರು, ಒಂದು ಹಗಳು ಕೂಡ ವ್ಯತ್ಯಾಸ ಆಗಬಾರದು. ಹಿಂದಿ ದೇಶವನ್ನು ಒಂದು‌ ಗೂಡಿಸುವ ಭಾಷೆ. ನಾವು ಇಂಗ್ಲೀಸ್ ಒಪ್ಪುತ್ತೇವೆ. ಹಿಂದೆ ಯಾಕೆ ಒಪ್ಪುತ್ತಿಲ್ಲ. ನಮ್ಮ ಮೊದಲ ಆದ್ಯತೆ ಕನ್ನಡ ಎಂದಿದ್ದಾರೆ.

ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಪ್ರಸಿದ್ದಿ ಕಡಿಮೆ, ಮಾಡಲು ಪ್ರಯತ್ನ ಇದಾಗಿದೆ. ಅಮಿತ್ ಶಾ ಹೇಳಿಕೆಯನ್ನ ಡೈವರ್ಟ್ ಮಾಡಲಾಗಿದೆ. ನಳೀನ್ ಕುಮಾರ್ ಕಟೀಲ್ ನಮ್ಮ ಸಂಘಟನೆಯ ಕಟ್ಟರ್ ನಾಯಕರಾಗಿದ್ದಾರೆ. ಅವರ ನೇತೃತ್ವದಲ್ಲಿ ಉಪಚುನಾವಣೆ ನಡೆಯುತ್ತದೆ. ಅವರ ನೇತೃತ್ವದಲ್ಲಿ ಉಪಚುನಾವಣೆ ನಡೆಯಲಿದ್ದು, ಅವರ ನೇತೃತ್ವದಲ್ಲಿ ಬಿಜೆಪಿ ಜೆಚ್ಚಿನ ಸ್ಥಾನ ಪಡೆಯಲಿದೆ ಎಂದರು.

ಇದೇ ವೇಳೆ ಉಪಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ವಿಚಾರ ಮಾತನಾಡಿದ ಈಶ್ವರಪ್ಪ, ಮೈತ್ರಿ ಇದ್ದರೇನು, ಇಲ್ಲದಿದ್ದರೇನು, ಮೈತ್ರಿಯಿದ್ದಾಗ 25 ಸೀಟು ಪಡೆದವು. ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ನಿರ್ನಾಮವಾಗಿವೆ. ಯಾವುದೇ ಸಂದರ್ಭದಲ್ಲಿ ಚುನಾವಣೆ ಬಂದ್ರೂ ನಾವು ಗೆಲ್ಲುತ್ತೇವೆ. ವಿಪಕ್ಷ ಸ್ಥಾನ ಹೋಗುತ್ತದೆ ಎಂದು ಸಿದ್ದರಾಮಯ್ಯ ಈಗ ಒದ್ದಾಡ್ತಾ ಇದಾರೆ ಎಂದು ತಿರುಗೇಟು ನಿಡಿದ್ದಾರೆ. ಜಿ.ಟಿ‌. ದೇವೇಗೌಡ ಅಷ್ಟೇ ಅಲ್ಲ, ದೇವೇಗೌಡ, ಸಿದ್ದರಾಮಯ್ಯ , ಬಿಜೆಪಿಗೆ ಬಂದರೂ ಅಚ್ಚರಿ ಇಲ್ಲ. ಮುಳುಗುವ ಹಡಗಿನಲ್ಲಿ ಯಾರು ಇರುತ್ತಾರೆ, ಇರಲು ಇಷ್ಟ ಪಡುತ್ತಾರೆ ಸ್ಪಷ್ಟಪಡಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.