ಅಬ್ಬಬ್ಬಾ…. ಈ ಸ್ಪೂನ್ ನಲ್ಲಿ ತಿನ್ನಲು ಸಾಧ್ಯವೇ..? : ವಿಚಿತ್ರ ಹೋಟೆಲ್..

ಈಗಿನ ಕಾಲದಲ್ಲಿ ಹೋಟೆಲ್‌ಗಳಲ್ಲಿ ಊಟ ರುಚಿಯಾಗಿರುವುದಕ್ಕಿಂತ ನೋಡಲು ಚೆನ್ನಾಗಿದ್ದರೆ ಜನ ಬರುವುದು ಜಾಸ್ತಿ. ಯಾಕೆಂದರೆ ಅವರು ಫೋಟೋ ತೆಗೆದು ಇನ್ಸ್ಟಾಗ್ರಾಮ್‌ನಲ್ಲಿ ಹಾಕುವುದೇ ಮಹತ್ವದ್ದಾಗಿರುತ್ತದೆ.

ಅಂಥವರಿಗೆಂದೇ ಈ ಹೋಟೆಲ್ ಮಾಡಿದಂಗಿದೆ. ಲಾಸ್ ಎಂಜಲಿಸ್‌ನ ಬಾರ್ಟನ್ ಜಿ ಎನ್ನುವ ಹೋಟೆಲ್ ಊಟದ ಅಲಂಕಾರ ಹಾಗೂ ಅತೀ ದೊಡ್ಡ ಪಾತ್ರೆಗಳಿಂದ ಹೆಸರು ಮಾಡುತ್ತಿದೆ.

ಈ ಹೋಟೆಲ್ ಇನ್ಸ್ಟಾಗ್ರಾಮಿಗರ ನಡುವೆ ಪ್ರಸಿದ್ಧವಾಗಿದೆ. ಇಲ್ಲಿ ಬಂದು ದೊಡ್ಡ ದೊಡ್ಡ ಚಮಚ, ಫೋರ್ಕ್ ಹಿಡಿದು ಪೋಸ್ ಕೊಡುವವರೇ ಜಾಸ್ತಿಯಂತೆ. ಊಟದ ರುಚಿ ಮಾತ್ರ ಸಾಮಾನ್ಯವಾಗಿದೆಯೆಂದು ಅಲ್ಲಿ ತಿನ್ನಲು ಹೋದವರು ಹೇಳಿದ್ದಾರಂತೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.