ಅಬಕಾರಿ ಇಲಾಖೆಗೂ ತಟ್ಟಿದ ಪ್ರವಾಹದ ಬಿಸಿ : ಹೆಚ್ಚು ಮಧ್ಯ ಮಾರಾಟ ಮಾಡುವಂತೆ ಬಾರ್ ಓನರ್ ಗಳಿಗೆ ಒತ್ತಾಯ..

ವರುಣನ ಆರ್ಭಟಕ್ಕೆ ಇಡೀ ಉತ್ತರ ಕರ್ನಾಟಕವೇ ನಲುಗಿ ಹೋಗಿದೆ. ಸಾವಿರಾರೂ ಕೋಟಿ ಹಣ ನಷ್ಟವಾಗಿದೆ. ಈ ನಷ್ಟದಿಂದ ಹೊರಬರಲಾಗಿದೆ ಇಲ್ಲಿನ ಜನರ ಪರಸ್ಥಿತಿ. ಈ ಪ್ರವಾಹದಿಂದ ಸಾರರ್ವಜನಿಕರ ಹಾಗೂ ಸರ್ಕಾರದ ಆಸ್ತಿಪಾಸ್ತಿ ಹಾನಿಯಾಗಿದೆ. ಇದರ ಜೋತೆಗೆ ಅಬಕಾರಿ ಇಲಾಖೆಗೂ ಸಹ ನಷ್ಟವಾಗಿದೆ. ಅಬಕಾರಿ ಇಲಾಖೆಗೆ ಬರಿ ನೆರೆಯಿಂದ ಅಷ್ಟೇ ನಷ್ಟವಾಗಿಲ್ಲ. ವಾಹನ ಸಂಚಾರ ಹೊಸ ಕಾಯ್ದೆಯಿಂದಲೂ ನಷ್ಟವಾಗಿದೆ. ಇದರಿಂದ ಅಬಕಾರಿ ಇಲಾಖೆ ಅಧಿಕಾರಿ ಬಾರ್ ಓನರ್ ಗಳಿಗೆ ಹೆಚ್ಚು ಮಧ್ಯ ಮಾರಾಟ ಮಾಡುವಂತೆ ದುಂಬಾಲು ಬಿದ್ದಿದ್ದಾರೆ. ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ….

ಪ್ರವಾದಿಂದ ಕಂಗೆಟ್ಟ ಜನ… ವರುಣನ ಆರ್ಭಟಕ್ಕೆ ತುತ್ತಾದ ಮನೆಗಳು… ಮನೆಯಿಲ್ಲದೇ ತಗಡಿನ ಶಡ್ಡಗಳಲ್ಲಿಯೇ ವಾಸ ಮಾಡುತ್ತಿರೋ ಜನರು.. ಮತ್ತೊಂದೆಡೆ ಹೊಸ ವಾನ ಸಂಚಾರಿ ಕಾಯ್ದೆಯಿಂದ ಕಂಗೆಟ್ಟ ಜನತೆ.. ಹೌದು ಇದೇಲ್ಲ ಕಾರಣಗಳಿಂದ ಮದ್ಯ ಮಾರಾಟದಲ್ಲಿ ಇಲಾಖೆಯಾಗಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಕಳೆದ ಮೂರು ತಿಂಗಳಲ್ಲಿ ಸರ್ಕಾರ ನೀಡಿದ ಟಾರ್ಗೇಟ್ ತಲುಪು ಆಗಿಲ್ಲ. ಇದಕ್ಕೆ ಕಾರಣ ಪ್ರವಾವ ಹಾಗೂ ಹೊಸ ವಾಹನ ಸಂಚಾರಿ ಕಾಯ್ದೆ. ಉತ್ತರ ಕರ್ನಾಟಕ್ಕೆ ನೆರೆ ಹಾವಳಿಯಿಂದ ಸಾವಿರಾರು ಕುಟುಂಬಗಳು ಬೀದಿಗೆ ಬಂದಿವೆ. ಇದಕ್ಕೆ ಧಾರವಾಡ ಜಿಲ್ಲೆಯಯೂ ಸಹ ಒಂದು. ಮಳೆ ಆವಾಂತರಕ್ಕೆ ಮಧ್ಯ ಪ್ರೀಯರು ಮಧ್ಯ ಬಳಕೆಗೆ ಕೊಂಚ್ಚ ಬ್ರೇಕ್ ಹಾಕಿದ್ದಾರೆ ಎನ್ನ ಬಹುದು. ಸತತ ಮಳೆಯಿಂದ ಜುಲೈ, ಅಗಸ್ಟ್ ಹಾಗೂ ಸಪ್ಟೆಂಬರ್ ತಿಂಗಳಲ್ಲಿ ಮಧ್ಯ ಮಾರಾಟದಲ್ಲಿ ಇಳಿಕೆಯಾಗಿದೆ. ಇದರ ವಿವರ ಹೀಗಿದೆ ನೋಡಿ.

ಧಾರವಾಡ ಜಿಲ್ಲೆಯಲ್ಲಿನ ವಿವಿರ.
2019 ಜುಲೈ ತಿಂಗಳಿನಲ್ಲಿ ನೀಡಲಾದ ಟಾರ್ಗೇಟ್ – 118563. ಸಾಧನೆ – 115736
2019 ಅಗಸ್ಟ್ ತಿಂಗಳಿನಲ್ಲಿ ನೀಡಲಾದ ಟಾರ್ಗೇಟ್ – 114817. ಸಾಧನೆ – 108072
2019 ಸಪ್ಟಂಬರ್ ತಿಂಗಳಿನಲ್ಲಿ ನೀಡಲಾದ ಟಾರ್ಗೇಟ್ – 122949. ಸಾಧನೆ – 117255.
ಇನ್ನೂ ತಾಲೂಕುವಾರು ನೋಡುವುದಾದರೇ

ಧಾರವಾಡ ಗ್ರಾಮೀಣ ವಿಭಾಗ : 2019 ಜುಲೈ ತಿಂಗಳಿನಲ್ಲಿ ನೀಡಲಾದ ಟಾರ್ಗೇಟ್ – 36578 ಸಾಧನೆ – 35062
2019 ಅಗಸ್ಟ್ ತಿಂಗಳಿನಲ್ಲಿ ನೀಡಲಾದ ಟಾರ್ಗೇಟ್ – 35324 ಸಾಧನೆ – 32944
2019 ಸಪ್ಟಂಬರ್ ತಿಂಗಳಿನಲ್ಲಿ ನೀಡಲಾದ ಟಾರ್ಗೇಟ್ – 37195. ಸಾಧನೆ – 35064

ಕಲಘಟಗಿ ತಾಲೂಕು : 2019 ಜುಲೈ ತಿಂಗಳಿನಲ್ಲಿ ನೀಡಲಾದ ಟಾರ್ಗೇಟ್ – 4763 ಸಾಧನೆ – 6343
2019 ಅಗಸ್ಟ್ ತಿಂಗಳಿನಲ್ಲಿ ನೀಡಲಾದ ಟಾರ್ಗೇಟ್ – 4772 ಸಾಧನೆ – 6267
2019 ಸಪ್ಟಂಬರ್ ತಿಂಗಳಿನಲ್ಲಿ ನೀಡಲಾದ ಟಾರ್ಗೇಟ್ – 6759. ಸಾಧನೆ – 7166

  

ಕುಂದಗೋಳ ತಾಲೂಕು : 2019 ಜುಲೈ ತಿಂಗಳಿನಲ್ಲಿ ನೀಡಲಾದ ಟಾರ್ಗೇಟ್ _ 7985 ಸಾಧನೆ – 7833
2019 ಅಗಸ್ಟ್ ತಿಂಗಳಿನಲ್ಲಿ ನೀಡಲಾದ ಟಾರ್ಗೇಟ್ – 7718 ಸಾಧನೆ – 8056
2019 ಸಪ್ಟಂಬರ್ ತಿಂಗಳಿನಲ್ಲಿ ನೀಡಲಾದ ಟಾರ್ಗೇಟ್ – 8289.ಸಾಧನೆ – 8248

ನವಲಗುಂದ ತಾಲೂಕು : 2019 ಜುಲೈ ತಿಂಗಳಿನಲ್ಲಿ ನೀಡಲಾದ ಟಾರ್ಗೇಟ್ – 7341 ಸಾಧನೆ – 7574
2019 ಅಗಸ್ಟ್ ತಿಂಗಳಿನಲ್ಲಿ ನೀಡಲಾದ ಟಾರ್ಗೇಟ್ – 7731 ಸಾಧನೆ – 7485
2019 ಸಪ್ಟಂಬರ್ ತಿಂಗಳಿನಲ್ಲಿ ನೀಡಲಾದ ಟಾರ್ಗೇಟ್ – 8557 ಸಾಧನೆ – 8750

ಧಾರವಾಡ ಶಹರ್ ವಿಭಾಗ : 2019 ಜುಲೈ ತಿಂಗಳಿನಲ್ಲಿ ನೀಡಲಾದ ಟಾರ್ಗೇಟ್ – 56657 ಸಾಧನೆ – 56812
2019 ಅಗಸ್ಟ್ ತಿಂಗಳಿನಲ್ಲಿ ನೀಡಲಾದ ಟಾರ್ಗೇಟ್ – 5545 ಸಾಧನೆ – 54752
2019 ಸಪ್ಟಂಬರ್ ತಿಂಗಳಿನಲ್ಲಿ ನೀಡಲಾದ ಟಾರ್ಗೇಟ್ – 60800 ಸಾಧನೆ – 59228

ಹುಬ್ಬಳಿ ವಿಭಾಗ : 2019 ಜುಲೈ ತಿಂಗಳಿನಲ್ಲಿ ನೀಡಲಾದ ಟಾರ್ಗೇಟ್ – 69896 ಸಾಧನೆ – 58924
2019 ಅಗಸ್ಟ್ ತಿಂಗಳಿನಲ್ಲಿ ನೀಡಲಾದ ಟಾರ್ಗೇಟ್ – 59272 ಸಾಧನೆ – 53320
2019 ಸಪ್ಟಂಬರ್ ತಿಂಗಳಿನಲ್ಲಿ ನೀಡಲಾದ ಟಾರ್ಗೇಟ್ – 62149 ಸಾಧನೆ – 58027

ಈ ಮೂರು ತಿಂಗಳಿನಲ್ಲಿ ಆಗಿರೊ ಮಧ್ಯ ಮಾರಾಟದಲ್ಲಿ ಇಳಖೆ ಬಗ್ಗೆ ಅಬಕಾರಿ ಅಧಿಕಾರಿಗಳನ್ನ ಕೇಳಿದ್ರೆ, ನೆರೆ ಹಾವಳಿ ಹಾಗೂ ಹೊಸ ವಾಹನ ಸಂಚಾರಿ ಕಾಯ್ದೆಯಿಂದ ಮಧ್ಯಮಾರಾಟದಲ್ಲಿ ಇಳಿಕೆ ಆಗಿದೆ ಎನ್ನುತ್ತಾರೆ.

ಮಧ್ಯ ಮಾರಾಟಕ್ಕೆ ನೆರೆ ಎಷ್ಟು ನಷ್ಟ ನೀಡಿದೇಯೋ ಅಷ್ಟೇ ನೂತನ ವಾಹನ ಸಂಚಾರ ಸಹ ಮಧ್ಯ ಮಾರಾಟಕ್ಕೆ ಕಡಿವಾನ ಹಾಕಿದೆ. ನೆರೆಯಿಂದ ಗ್ರಾಮೀಣ ಭಾಗದ ಜನರು ತಮ್ಮ ಮನೆ, ಜಮೀನಗಳಲ್ಲಿನ ಬೆಳೆ ಹಾನಿಯಾಗಿವೆ. ಅಲ್ಲದೇ ಪ್ರವಾಹದಿಂದ ರಸ್ತೆ, ಸೇತುವೆಗಳು ಕುಸಿದು ಸಂಚಾರಕ್ಕೆ ಅಡ್ಡಿ ಮಾಡಿದ್ದವು. ಇದರಿಂದ ಗ್ರಾಮೀಣ ಪ್ರದೇಶದ ಜನರು ನಗರಕ್ಕೆ ಸಂಚಾರ ಮಾಡಲು ಕಷ್ಟವಾಗಿತ್ತು. ಜೋತೆಗೆ ಹೊಸ ವಾಹನ ಸಂಚಾರ ನಿಯಮದಿಂದ ಬಾರ್ ಗಳಲ್ಲಿ ಕುಡಿಯುವರ ಸಂಖ್ಯೆ ಕಡಿಮೆ ಆಗಿದೆ. ಈ ಎಲ್ಲ ಕಾರಣದಿಂಧ ಮಧ್ಯ ಮಾರಾಟದಲ್ಲಿ ಇಳಿಕೆ ಆಗಿದೆ. ಆದ್ರೆ ಸರ್ಕಾರ ನೀಡಿರೊ ಟಾರ್ಗೇಟ್ ತಲುಪಲು ಅಬಕಾರಿ ಅಧಿಕರಿಗಳು ಬಾರ್ ಮಾಲೀಕರ ಮೇಲೆ ಒತ್ತಡ ತರುತ್ತಿದ್ದಾರೆ. ಹೆಚ್ಚು ಮಧ್ಯ ಮಾರಾಟ ಮಾಡುವಂತೆ ಮಧ್ಯದಂಗಡಿ ಮಾಲೀಕರಿಗೆ ಅಧಿಕಾರಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಕಂಗಾಲಾದ ಬಾರ್ ಮಾಲೀಕರ ಸಂಘವು ಅಧಿಕಾರಿಗಳಿಗೆ ಮನವಿ ಸಹ ಮಾಡಿದ್ದಾರೆ. ನೀವು ನೀಡಿದ ಟಾರ್ಗೇಟ್ ಮುಟ್ಟಲು ಆಗುವುದಿಲ್ಲ ಎಂದು ಎನ್ನುತ್ತಾರೆ ಬಾರ್ ಮಾಲೀಕರ ಸಂಘದ ಅಧ್ಯಕ್ಷ ಮಹೇಶ ಶಟ್ಟಿ.

ಒಂದೆಡೆ ನೆರೆ ಹಾವಳಿಯಿಂದ ಸಾವಿರಾರು ಕೋಟಿ ನಷ್ಟವಾಗಿದ್ದು ಸರ್ಕಾರ ಪರಿಹಾರ ನೀಡುವಲ್ಲಿ ನಿರತವಾಗಿದೆ. ಸರ್ಕಾರಕ್ಕೆ ಹೆಚ್ಚು ಆದಾಯ ಬರುವ ಇಲಾಖೆಗಳಲ್ಲಿ ಅಬಕಾರಿ ಇಲಾಖೆಯು ಸಹ ಒಂದು. ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯಿಂದ ಮಧ್ಯ ಮಾರಾಟಗಾರರಿಗೆ ಪ್ರತಿ ತಿಂಗಳು ಟಾರ್ಗೇಟ್ ನೀಡಲಾಗಿರುತ್ತದೆ. ಆದ್ರೆ ಕಳೆದ ಮೂರು ತಿಂಗಳ ಮಧ್ಯ ಮಾರಾಟ ನೋಡಿದ್ರೆ ಮಾರಾಟದಲ್ಲಿ ಇಳಿಕೆ ಕಂಡು ಬಂದಿದೆ. ಏನೇ ಆಗಲಿ ಸರ್ಕಾರ ನೀಡಿದ ಟಾರ್ಗೇಟ್ ನೀಂಧ ಅಧಿಕಾರಿ ಮಧ್ಯದಂಗಡಿ ಮಾಲೀಕರ ಮೇಲೆ ಹೊರೆ ಹೇರಿದ್ರೆ, ಇತ್ತ ನೆರೆ ಹಾವಳಿಯಿಂದ ಮಧ್ಯ ಮಾರಾಟವಾಗದೇ ಸರ್ಕಾರ ನೀಡಿದ ಟಾರ್ಗೇಟ್ ರೀಚ್ ಮಾಡದೆ ಕಂಗಾಲಾಗಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.