ಅಪಘಾತವಾದ ವ್ಯಕ್ತಿಗೆ ಉಪಚಾರ ಮಾಡುವ ಮೂಲಕ ಮಾನವೀಯತೆ ಮೆರೆದ ನಟ

ಸ್ಯಾಂಡಲ್‍ವುಡ್ ಲವ್ಲಿ ಸ್ಟಾರ್ ಪ್ರೇಮ್ ಮಾನವೀಯತೆ ಮೆರೆದಿದ್ದಾರೆ.

ನಟ ಪ್ರೇಮ್ ಅವರು ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ಭೇಟಿ ತೆರಳುತ್ತಿದ್ದರು. ಈ ವೇಳೆ ತುಮಕೂರಿನ ಶಿರಾದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಚಿತ್ರದುರ್ಗ ಮೂಲದ ವ್ಯಕ್ತಿಯೊಬ್ಬರು ಬೈಕಿನಿಂದ ಕೆಳಗೆ ಬಿದಿದ್ದಾರೆ.

ಬೈಕಿನಿಂದ ಕೆಳಗೆ ಬಿದ್ದು ವ್ಯಕ್ತಿ ಮುಖ, ಮೈ ಹಾಗೂ ಕೈಯಿಗೆ ಗಾಯ ಮಾಡಿಕೊಂಡಿದ್ದಾರೆ. ಇದನ್ನು ನೋಡಿದ ನಟ ಪ್ರೇಮ್ ಅಪಘಾತವಾದ ವ್ಯಕ್ತಿಗೆ ಉಪಚಾರ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಲ್ಲದೆ ಅಂಬುಲೆನ್ಸ್ ಗೆ ಕರೆ ಮಾಡಿದ್ದಾರೆ.

ಪ್ರೇಮ್ ಅಂಬುಲೆನ್ಸ್ ಬರುವವರೆಗೂ ಕಾದು ನಿಂತು ಬಳಿಕ ಅಲ್ಲಿಂದ ತೆರೆಳಿದ್ದಾರೆ. ಅಪಘಾತದಲ್ಲಿ ಸಣ್ಣಪುಟ್ಟ ಗಾಯವಾಗಿರುವ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತನ್ನ ಊರಿಗೆ ಮರಳಿದ್ದಾರೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂಬುದು ತಿಳಿದು ಬಂದಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.