ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರ ಪಟ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅಗ್ರಗಣ್ಯ

ಕೆಜಿಎಫ್ ಮೂಲಕ ನ್ಯಾಶನಲ್ ಸ್ಟಾರ್ ಆದ ರಾಕಿಂಗ್ ಸ್ಟಾರ್ ಯಶ್, ‘ದಿ ಜೀ ಕ್ಯೂ 50’ ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರ ಪಟ್ಟಿಯಲ್ಲಿ ಅಗ್ರಗಣ್ಯರು. ಆ 50 ಅತ್ಯಂತ ಪ್ರಭಾವಶಾಲಿಗಳಲ್ಲಿ ಏಕೈಕ ಕನ್ನಡಿಗ ಅಂದರೆ ಅದು ಯಶ್. ‘ಕೆಜಿಎಫ್’ ಸಿನಿಮಾ ಮೂಲಕ ಯಶ್ ನ್ಯಾಶನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದರು.
ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಅವರು ಯಶ್‌ಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಮುಂಬೈನಲ್ಲಿ ನಡೆದ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರು ಭಾಗವಹಿಸಿದ್ದರು.
ಅಮೆರಿಕಾದ ನ್ಯೂಯಾರ್ಕ್ ಮೂಲದ ಅಂತರಾಷ್ಟ್ರೀಯ ಜಿ ಕ್ಯೂ ಪುರುಷರ ಮಾಸ ಪತ್ರಿಕೆ, ದಿ ಜಿ ಕ್ಯೂ ಇಂಡಿಯಾ ಆಯೋಜಿಸಿದ್ದ, ಜಿಕ್ಯೂ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರು ಪಟ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಪ್ರಮುಖ ಸ್ಥಾನ ಪಡೆದುಕೊಂಡಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಯುವ ಮನಸುಗಳು ಸೃಷ್ಟಿಸಿದ ಸಂಚಲನ, ಬದಲಾವಣೆಗೆ ಕಾರಣವಾದ ಅವರ ಯೋಚನೆ, ಯೋಜನೆಯನ್ನ ಪರಿಗಣಿಸಿ, ಭಾರತದ 50 ಶ್ರೇಷ್ಠ ಯುವ ಪ್ರಭಾವಶಾಲಿಗಳಿಗೆ ಜೀ ಕ್ಯೂ ಇಂಡಿಯಾ ಪ್ರಶಸ್ತಿಯನ್ನ ನೀಡಿ ಪುರಸ್ಕರಿಸಿದೆ.
ವಿಶೇಷ ಅಂದರೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರೋ ಈ 50 ಯುವ ಭಾರತೀಯರು ಒಂದೇ ವೇದಿಕೆಯಲ್ಲಿ ಸೇರಿಸಿ ದಿ ಜೀ ಕ್ಯೂ ಕಾರ್ಯಕ್ರಮವನ್ನ ಮಾಡಿದೆ. ಕೆಜಿಎಫ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 250 ಕೋಟಿ ರೂಪಾಯಿ ಗಳಿಸಿ ದಾಖಲೆ ಮಾಡಿತ್ತು. ಅದರಲ್ಲೂ ವಿಶೇಷವಾಗಿ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ದೊರಕಿಸಿಕೊಟ್ಟಿದ್ದಾರೆ. 19 ದೇಶಗಳಲ್ಲಿ ಜನಪ್ರಿಯತೆಯನ್ನ ಪಡೆದುಕೊಂಡಿರೋ ಅಂತರಾಷ್ಟ್ರೀಯ ಮಟ್ಟದ ದಿ ಜೀ ಕ್ಯೂ ಮಾಸ ಪತ್ರಿಕೆ ಆಯೋಜಿಸಿದ್ದ ‘ದಿ ಜೀ ಕ್ಯೂ ಇಂಡಿಯಾ’ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರು ಪ್ರಶಸ್ತಿ ಪಟ್ಟಿಯಲ್ಲಿ ನಟ ಯಶ್‌ಗೆ 2019ರ ಭಾರತೀಯ ಚಿತ್ರರಂಗದ ಅತ್ಯಂತ ಪ್ರಭಾವ ಶಾಲಿ ಯುವ ಭಾರತೀಯ ಪ್ರಶಸ್ತಿಯನ್ನ ನೀಡಿ ಗೌರವಿಸಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.