ಅಣ್ಣ ತಂಗಿಯ ಸಂಬಂಧ ಶುಭ್ರ ಪ್ರೀತಿಯ ಸಂಕೇತ ‘ರಕ್ಷಾ ಬಂಧನ’ ಬಂದೇ ಬಿಡ್ತು…

ರಕ್ಷಾ ಬಂಧನಕ್ಕೆ ತಯಾರಿ ನಡೆಯುತ್ತಿದೆ. ಸಹೋದರನಿಗೆ ರಾಖಿ ಕಟ್ಟುವ ಸಂಭ್ರಮದಲ್ಲಿ ಸಹೋದರಿಯರಿದ್ದರೆ, ರಾಖಿ ಕಟ್ಟಿಸಿಕೊಂಡು ಚೆಂದದ ಉಡುಗೊರೆ ನೀಡುವ ಸಿದ್ಧತೆಯಲ್ಲಿ ಸಹೋದರರಿದ್ದಾರೆ.

ರಕ್ಷಾ ಬಂಧನ ಮಂಗಳದಾಯಕವಾಗಿರಲಿ, ರಾಖಿ ಕಟ್ಟುವ ಸಂದರ್ಭದಲ್ಲಿ ಹಾಗೂ ಭವಿಷ್ಯದಲ್ಲಿ ಯಾವುದೇ ಕಷ್ಟ ಬರದಿರಲಿ ಎನ್ನುವವರು ಕೆಲವೊಂದು ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ರಕ್ಷಾಬಂಧನದ ದಿನ ರಾಖಿ ಅವಶ್ಯವಾಗಿ ಬೇಕು. ಅದ್ರ ಜೊತೆ ಪೂಜಾ ಥಾಲಿ ವಿಶೇಷ ಪಡೆಯುತ್ತದೆ. ಅದ್ರಲ್ಲಿ ಐದು ವಸ್ತುಗಳು ಅಗತ್ಯವಾಗಿ ಇರಬೇಕು.

ಸಹೋದರನಿಗೆ ಕಟ್ಟಲು ರಾಖಿ, ತಿಲಕ ಹಚ್ಚಲು ಕುಂಕುಮ ಹಾಗೂ ಅಕ್ಷತೆ, ತೆಂಗಿನಕಾಯಿ, ಸಿಹಿ ತಿಂಡಿ, ತಲೆಗೆ ಹಾಕಲು ಸಣ್ಣ ಬಟ್ಟೆ ಅಥವಾ ಕರವಸ್ತ್ರ. ಇದನ್ನು ಹೊರತುಪಡಿಸಿ ಸಹೋದರನಿಗೆ ಉಡುಗೊರೆ ನೀಡಲು ಬಯಸಿದ್ದರೆ ಅದನ್ನು ಥಾಲಿಯಲ್ಲಿ ಇಡಿ.

ಅಣ್ಣ ತಂಗಿಯ ಸಂಬಂಧ ಶುಭ್ರ ಪ್ರೀತಿಯ ಸಂಕೇತ. ಒಬ್ಬರನ್ನೊಬ್ಬರು ರಕ್ಷಣೆ ಮಾಡಲು ಇಬ್ಬರೂ ಬದ್ಧರಾಗಿರುತ್ತಾರೆ. ನಮ್ಮ ದೇಶದಲ್ಲಿ ಕಾಲಕ್ಕನುಗುಣವಾಗಿ ಆಚರಣೆ ಬದಲಾದರೂ ರಕ್ಷಾಬಂಧನ ಹಬ್ಬದ ಪ್ರಾಮುಖ್ಯತೆ ಮಾತ್ರ ಕಡಿಮೆಯಾಗಿಲ್ಲ.

ಆ ದಿನ ಸಹೋದರಿ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ ಸೋದರನ ಆಶೀರ್ವಾದ ಪಡೆಯುತ್ತಾಳೆ. ತಂಗಿಯ ರಕ್ಷಣೆ ಅಣ್ಣನಿಂದ ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ಈ ಹಬ್ಬ ದಟ್ಟಗೊಳಿಸುತ್ತದೆ. ಅಣ್ಣ ತಂಗಿಯರ ಭಾಂಧವ್ಯವನ್ನು ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಸ್ಮರಿಸುವ ಈ ದಿನ  ಬಾಲ್ಯದ ಅನೇಕ ಸಿಹಿ ಕಹಿ ನೆನಪುಗಳನ್ನು ಮನದಲ್ಲಿ ಮೂಡಿಸುತ್ತದೆ.

ಸಹೋದರ- ಸಹೋದರಿಯರ ನಢುವಿನ ಭ್ರಾತೃತ್ವದ ನಂಟನ್ನು ಗಟ್ಟಿಗೊಳಿಸುವ ಈ ಆಚರಣೆ ನಮ್ಮ ದೇಶದ ಸಂಸ್ಕೃತಿಯ ಪ್ರತೀಕವೂ ಹೌದು.

ಜನ್ಮಜನ್ಮಕೂ ಇವನೇ ನನ್ನ ಅಣ್ಣನಾಗಲಿ, ಇವಳೇ ನನ್ನ ತಂಗಿಯಾಗಲಿ ಎಂಬ ಹಾರೈಕೆಯೊಂದಿಗೆ ಹಬ್ಬ ಆಚರಿಸುತ್ತಿರುವ ಎಲ್ಲಾ ಅಣ್ಣ ತಂಗಿಯರಿಗೂ ರಕ್ಷಾಬಂಧನದ ಶುಭಾಶಯಗಳು.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.