ಅಂಜನಾದ್ರಿ ಬೆಟ್ಟಕ್ಕೆ ಚಂದನ್ ಶೆಟ್ಟಿ ಭೇಟಿ : ರ್ಯಾಪರ್ ಸ್ಟಾರ್ ಭುಜವೇರಿದ ಕೋತಿ

ಮೊನ್ನೆಯಷ್ಟೇ ಗೊಂಬೆ ನಿವೇದಿತಾ ಗೌಡ ಜೊತೆ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ರ್ಯಾಪರ್ ಸ್ಟಾರ್ ಚಂದನ್ ಶೆಟ್ಟಿ ಇಂದು ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ತೆರಳಿ ಹನುಮನ ದರ್ಶನ ಪಡೆದಿದ್ದಾರೆ.

ಹೌದು… ಮೈಸೂರು ದಸರಾದಲ್ಲಿ ಸಭೆ ಮೇಲೆ ನಿವೇದಿತಾಗೌಡ ಅವರಿಗೆ ರಿಂಗ್ ತೊಡಿಸಿ ಪ್ರಪೋಸ್ ಮಾಡಿದ ಚಂದನ್ ವಿಚಾರ ಭಾರೀ ಸುದ್ದಿ ಮಾಡಿತ್ತು. ಆದರೆ ಅದನ್ನೆಲ್ಲಾ ಮರೆತ ಚಂದನ್ ಗೊಂಬೆ ಮೈಸೂರಿನಲ್ಲಿ ಮೊನ್ನೆ ಅದ್ದರೂ ನಿಶ್ಚತಾರ್ಥ ಮಾಡಿಕೊಂಡಿದ್ದಾರೆ.

ಇಂದು ಅಂಜನಾದ್ರಿ ಬೆಟ್ಟಕ್ಕೆ ರ್ಯಾಪರ್ ಸ್ಟಾರ್ ಚಂದನ್ ಶೆಟ್ಟಿ ಭೇಟಿ ನೀಡಿದ ವೇಳೆ ಅಭಿಮಾನಿಗಳು ಮಾತ್ರವಲ್ಲದೇ ಕೋತಿ ಕೋಡ ಸೆಲ್ಫಿ ತೆಗೆಸಿಕೊಂಡಿದೆ. ಏನಿದು ಅಂತ ಆಶ್ಚರ್ಯ ಆಗಬೇಡಿ.

ಹೇಳಿ ಕೇಳಿ ಚಂದನ್ ಹಾಡಿನಲ್ಲಿ ತುಂಬಾನೇ ಫೇಮಸ್, ಅದ್ರಲ್ಲೂ ಬಿಗ್ ಬಾಸ್ ಸೀಸನ್ 6ರ ವಿನ್ನರ್ ಕೂಡ ಹೌದು.. ಅವರಿಗೆ ಫ್ಯಾನ್ಸ್ ಕೂಡ ಸಿಕ್ಕಾಪಟ್ಟೆ ಜನ. ದೇವಸ್ಥಾನದಲ್ಲಿ ಸಿಕ್ಕ ಚಂದನ್ ಅವರ ಜೊತೆಗೆ ಮಾತನಾಡಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಅಭಿಮಾನಿಗಳಲ್ಲಿ ಕೋತಿ ಕೂಡ ಒಂದು.

ಆ ಕೋತಿ ಚಂದನ್ ಭುಜವೇರಿದ ಮೇಲೇರಿ ಕುಳಿತುಕೊಂಡಿದೆ. ಭುಜದ ಮೇಲೆ ಕುಳಿತ ಕೋತಿ ಜೊತೆ ಚಂದನ್ ಶೆಟ್ಟಿ ಸೆಲ್ಫಿ ತೆಗೆದುಕೊಂಡಿದ್ದಾರೆ. ಇತ್ತೀಚಿಗೆ ಬಹಳಷ್ಟು ಸ್ಟಾರ್ ನಟರು ಅಂಜನಾದ್ರಿಗೆ ಭೇಟಿ ನೀಡುತ್ತಿದ್ದು, ಚಂದನ್ ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.