ಮಧುಮೇಹಿಗಳಿಗೊಂದು ಸಿಹಿ ಸುದ್ದಿ : ನಿಮಗಾಗಿ ಬಂದಿದೆ ಡಯಾಬಿಟಿಸ್‌ ಅಕ್ಕಿ

ಸಿಲಿಕಾನ್ ಸಿಟಿಯಲ್ಲಿ ಮಧುಮೇಹಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹೆಚ್ಚು ಅನ್ನ ತಿನ್ನುವ ಅಭ್ಯಾಸ ಇರುವ ನಮ್ಮ ಜನ ಮಧುಮೇಹ ಬಂದರೂ ಅನ್ನ ಬಿಡೋಕೆ ರೆಡಿ ಇರೋದಿಲ್ಲ… ಇಂತವ್ರಿಗಾಗಿಯೇ ಇದೆ ಡಯಾಬಿಟಿಸ್ ಅಕ್ಕಿ… ಇದಕ್ಕಿರೋ ಡಿಮ್ಯಾಂಡು ಬಲು ಜೋರು…


ನೋಡೋಕೆ ಕಡುಗಪ್ಪು ಬಣ್ಣದ ಈ ಅಕ್ಕಿ ಸ್ವಲ್ಪ ಅಪರೂಪವೇ. ಆಡುಭಾಷೆಯಲ್ಲಿ ಕಪ್ಪು ಅಕ್ಕಿ, ಕರಿ ಅಕ್ಕಿ ಎಂದೆಲ್ಲಾ ಇದಕ್ಕೆ ಹೆಸರಿದ್ದರೂ ಕೂಡಾ ಜನರ ನಡುವೆ ಡಯಾಬಿಟಿಸ್ ಅಕ್ಕಿ ಎಂದೇ ಹೆಸರುವಾಸಿಯಾಗಿದೆ. ಯಾಕಂದ್ರೆ ಈ ಅಕ್ಕಿ ಮಧುಮೇಹಿಗಳಿಗೆ ಅತ್ಯಂತ ಸೂಕ್ತ ಆಹಾರ. ಅನ್ನ ಮಾಡುವಾಗ ಒಂದಕ್ಕೆ ಮೂರು ಪಟ್ಟು ನೀರು ಹಾಕಿ ಬೇಯಿಸಬೇಕು ಎನ್ನುವುದರ ಜೊತೆಗೆ ಸ್ವಲ್ಪ ತಿಂದರೆ ದಿನವಿಡೀ ಯಾವುದೇ ನಿಶ್ಯಕ್ತಿ ಇಲ್ಲದೇ ಕಳೆಯಬಹುದು. ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರುಪೇರಾಗುವುದಿಲ್ಲ ಎನ್ನುವುದು ಮತ್ತೊಂದು ಪ್ಲಸ್ ಪಾಯಿಂಟ್.
ಈಗಂತೂ ಪ್ರತೀ ಮನೆಯಲ್ಲೂ ಒಬ್ಬರಾದ್ರೂ ಮಧುಮೇಹಿಗಳು ಇದ್ದೇ ಇರ್ತಾರೆ. ಆದ್ರೆ ಅವ್ರಲ್ಲಿ ಬಹಳಷ್ಟು ಜನರಿಗೆ ಅನ್ನ ತಿನ್ನದಿದ್ರೆ ಊಟ ಮಾಡಿದ ಸಂತೃಪ್ತಿ ಸಿಗೋದೇ ಇಲ್ಲ. ಇಂಥವ್ರಿಗೆಲ್ಲಾ ಡಯಾಬಿಟಿಸ್ ಅಕ್ಕಿ ಆಪ್ತಮಿತ್ರನಂತೆ ಒದಗಿ ಬಂದಿದೆ. ಅನ್ನವನ್ನೂ ತಿನ್ನಬಹುದು, ಮತ್ತು ಅದರಿಂದ ಶುಗರ್ ಲೆವೆಲ್ ಕೂಡಾ ಜಾಸ್ತಿಯಾಗೋಲ್ಲ ಎನ್ನುವ ಇದರ ಪ್ರಯೋಜನ ಅನೇಕರ ಮನಗೆದ್ದಿದೆ. ಇದರ ಬೆಲೆ ಕೆಜಿಗೆ 185 ರೂಪಾಯಿ. ಬೆಲೆ ದುಬಾರಿಯಾದ್ರೂ ಆರೋಗ್ಯಕ್ಕೆ ಸಹಕಾರಿ ಎನ್ನುವುದು ಜನರ ಅನಿಸಿಕೆ.
ಮಾಮೂಲಿ ಅಕ್ಕಿಗಿಂತ ಇದು ನಿಧಾನಕ್ಕೆ ಬೇಯುತ್ತದೆ…ಅಷ್ಟೇ ನಿಧಾನವಾಗಿ ಅರಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಕಾರ್ಬೊಹೈಡ್ರೇಟ್ ಇಲ್ಲದಿರೋದ್ರ ಜೊತೆಗೆ ಯಾವುದೇ ಪಾಲಿಶ್ ಮಾಡದಿರೋದ್ರಿಂದ ಹೇರಳವಾಗಿ ನಾರಿನಂಶ ಕೂಡಾ ಇರುತ್ತದೆ. ಈ ಎಲ್ಲಾ ಗುಣಗಳು ಸೇರಿ ಡಯಾಬಿಟಿಸ್ ಅಕ್ಕಿಗೆ ಭಾರೀ ಬೇಡಿಕೆ ಸೃಷ್ಟಿಸಿದೆ. ಸಾವಯವ ಪದ್ಧತಿಯಲ್ಲೇ ಬೆಳೆಯುವ ಈ ವಿಶಿಷ್ಟ ಅಕ್ಕಿ ಅನೇಕರ ಆರೋಗ್ಯ ಸುಧಾರನೆಗೆ ಸಹಕಾರಿಯಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಇ-ಮೇಲ್ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

Social Media Auto Publish Powered By : XYZScripts.com