ಅತ್ಯಾಚಾರಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟವಳು 20K ಕೋಟಿಯ ಒಡತಿಯಾಗಿದ್ದು ಹೇಗೆ??

ಅಮೆರಿಕಾದ ಕಡುಬಡತನದ ಕುಟುಂಬದಲ್ಲಿ ಒಬ್ಬ ಕಪ್ಪು ಹುಡುಗಿಯಾಗಿ ಹುಟ್ಟಿ, ತನ್ನ 9ನೇ ವನ್ಯಸ್ಸಿನಲ್ಲಿ ತನ್ನ ಸಂಬಂಧಿಗಳಿಂದಲೇ ಲೈಂಗಿಕ ಕಿರುಕುಳಕ್ಕೊಳಗಾಗಿ, 14ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿ, ಮತ್ತು ತನ್ನ ತಾಯಿ ಮತ್ತು ಸಹೋದರರನ್ನ ಕಳೆದುಕೊಂಡು ಜೀವನದಲ್ಲಿ ಸಾಧನೆ ಮಾಡಿದ ಈ ಹೆಣ್ಣು ಮಗಳು ಇವಳು.

ಇದು ಪ್ರಪಂಚ ಟಿವಿ ಶೋಗಳ ರಾಣಿಯಾಗಿ ಮೆರೆಯುತ್ತಿರುವ ಅಮೆರಿಕಾದ ಓಫ್ರಾ ವಿನ್ ಫ್ರೇ ಅವರ ಜೀವನದ ಕತೆ.ಓಪ್ರಾ ಬಾಲ್ಯ ನರಕವಾಗಿತ್ತು. ಈಕೆ ಹುಟ್ಟಿದ್ದು ಅಮೆರಿಕಾದ ಮಿಸ್ಸಿಸ್ಸಿಪ್ಪಿಯಲ್ಲಿ. ಇವಳು ಹುಟ್ಟಿದಾಗ ಅವಳ ತಾಯಿಗೆ ಗಂಡ ಕೈ ಕೊಟ್ಟು ಓಡಿ ಹೋಗಿದ್ದ. ಓಫ್ರಾ ತನ್ನ 9 ನೇ ವಯಸ್ಸಿನಲ್ಲೇ ಅತ್ಯಾಚಾರಕ್ಕೊಳಗಾಗಿದ್ದಳು.ಪ್ರೌಢಾವಸ್ಥೆಗೆ ಬರುವಾಗಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಳು. ಪರಿಣಾಮ 14 ತುಂಬುವಾಗಲೇ ಮಗು ವನ್ನು ಹೆರುವ ಸ್ಥಿತಿ ಅವಳಿಗೆ ಬಂದಿತ್ತು.

ಈ ಎಲ್ಲಾ ಸಮಸ್ಯೆಗಳಿಂದ ಹೊರ ಬರಲು ಓಫ್ರಾ ಹೊಸ ಕೆಲಸಗಳನ್ನು ಮಾಡಲು ಶುರು ಮಾಡಿದಳು ಆದರೆ ಎಲ್ಲ ಕೆಲಸದಲ್ಲೂ ಸೋಲನ್ನು ಅನುಭವಿಸುತ್ತಿದ್ದಳು.ಕೊನೆಗೆ ಓಪ್ರಾ ಟಿವಿ ಚಾನಲ್ ಸೇರಿದಳು. ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದಾಗ ಅವಳ ವಯಸ್ಸು 19. ಪತ್ರಿಕೋದ್ಯಮದಲ್ಲಿ ಹೊಸ ಸಂಬಂಧವೊಂದು ಚಿಗುರಿತು ಅಂದುಕೊಳ್ಳೋ ಸಮಯದಲ್ಲಿ ಅವನು ಸಹ ಇವಳಿಗೆ ಕೈಕೋಟ್ಟಾಗ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಪಟ್ಟಳು.

ಡ್ರಗ್ಸ್ ಸೇವನೆ ಮತ್ತು ಅನೈತಿಕ ಸಂಬಂಧಗಳು ಅವಳ ಬದುಕನ್ನು ಹೀನಾಯ ಸ್ಥಿತಿಗೆ ತಂದಿದ್ದವು..ಆದರೂ ಅವಳಲ್ಲಿದ್ದ ಟ್ಯಾಲೆಂಟ್,ಟಿವಿ ನಿರೂಪಣೆಯ ಕಲೆ ಆಕೆಗೆ ಒಲಿದು ಬಂದಿತ್ತು.ಕೆಟ್ಟ ಚಟಗಳಿಂದ ತುಂಬಾ ದಪ್ಪವಾಗಿದ್ದ ಅವಳ ಆ ಕೆಲಸಕ್ಕೂ ಯೋಗ್ಯವಾಗಿರಲಿಲ್ಲ ಹೀಗಿದ್ದೂ 1985ರಲ್ಲಿ ಈಕೆಯ ‘ಚಿಕಾಗೋ ಟಾಕ್ ಶೋ’ ಆರಂಭವಾದಾಗ ಜನ ಹುಚ್ಚೆದ್ದು ನೋಡಲು ಆರಂಭಿಸಿದರು. ಯಾವ ಮಟ್ಟಿಗೆ ಅಂದರೆ ಇವತ್ತಿಗೂ ಟಾಕ್ ಶೋ ವಿಭಾಗದಲ್ಲಿ ಅತೀ ಹೆಚ್ಚಿನ TRP ದಾಖಲೆ ಇರುವುದು ಈಕೆಯ ಹೆಸರಿನಲ್ಲೇ.

ಹೀಗೆ ಒಂದೊಂದೇ ಹೆಜ್ಜೆಯನ್ನ ಇಡುತ್ತ 2008ರ ಹೊತ್ತಿಗೆ ವಿಶ್ವದಲ್ಲಿ ಯಾವ ಟಿವಿ ನಿರೂಪಕರೂ ಪಡೆಯದಷ್ಟು ಸಂಬಾವನೆ ಪಡೆಯುತ್ತಿದ್ದಳು.ನಂತರ ತನ್ನದೇ ಓಫ್ರಾ ವಿನ್’ಫ್ರೇ ನೆಟ್’ವರ್ಕ್ ಹೆಸರಿನಲ್ಲಿ ಚಾನಲ್ ಕಟ್ಟಿದಳು. ಓಫ್ರಾ ಡಾಟ್ ಕಾಂ, ಓಫ್ರಾ ರೇಡಿಯೋ ಹೀಗೆ ಒಂದೊಂದೇ ಕಂಪೆನಿ ಆರಂಭಿಸಿದಳು. ಇವತ್ತು ವಿಶ್ವದ ಶ್ರೀಮಂತ ಪತ್ರಕರ್ತರ ಪಟ್ಟಿಯಲ್ಲಿ ಇವಳಿಗೂ ಒಂದು ಸ್ಥಾನ ಮೀಸಲಿದೆ. ಬಡತನಲ್ಲೇ ಬೆಳೆದು ಬಂದ ಓಫ್ರಾಳ ಇವತ್ತಿನ ಆಸ್ತಿ ಸುಮಾರು 20 ಸಾವಿರ ಕೋಟಿ.

ಪ್ರತಿಭೆಯೊಂದಿದ್ದರೆ ಸಾಕು ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಉದಾಹರಣೆಯಾಗಿ ನಿಲ್ಲುವ ಹೆಸರು ಓಫ್ರಾ ವಿನ್’ಫ್ರೇ. ಮಾಧ್ಯಮಗಳಲ್ಲಿ ಭವಿಷ್ಯವಿಲ್ಲ, ಎಷ್ಟು ಮಾಡಿದರೂ ಅಷ್ಟೇ ಎಂದು ಆಸಕ್ತಿ ಕಳೆದುಕೊಳ್ಳುವವರಿಗೆ ಓಫ್ರಾ ವಿನ್’ಫ್ರೇ ಒಬ್ಬ ಸ್ಪೂರ್ತಿದಾಯಕ ವ್ಯಕ್ತಿ…

ನಿಮ್ಮದೊಂದು ಉತ್ತರ

ನಿಮ್ಮ ಇ-ಮೇಲ್ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

Social Media Auto Publish Powered By : XYZScripts.com