ಬೆಳ್ಳಂಬೆಳಗ್ಗೆಯೇ ಹುಬ್ಬಳ್ಳಿಯಲ್ಲಿ ಲಾಂಗು ಮಚ್ಚುಗಳ ಸದ್ದು!

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಶುಕ್ರವಾರ ಬೆಳಿಗ್ಗೆ ಲಾಂಗು, ಮಚ್ಚುಗಳು ಹಾಗೂ ತಲ್ವಾರ ಝಳಪಿಸಿವೆ. ಹಳೆ ವೈಶಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.  

ಸಂದೀಪ ಪೂಜಾರಿ ಹಲ್ಲೆಗೆ ಒಳಗಾದ  ಯುವಕ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಮಚ್ಚು, ಲಾಂಗುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬಂಕಾಪುರ ಚೌಕನ ಪಾಟೀಲ್ ಗಲ್ಲಿ ಯಲ್ಲಿ ನಡೆದಿದೆ. ಪಾಟೀಲ್ ಗಲ್ಲಿ ಯಲ್ಲಿ ನಿಂತಿದ್ದ ಸಂದೀಪ ಮೇಲೆ ದುಷ್ಕರ್ಮಿ ಗಳು ತಲ್ವಾರ್ ನಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ಸಂದೀಪನ ಮುಖ, ತಲೆ ಹಾಗೂ ಬೆನ್ನಿಗೆ ಗಂಭೀರವಾದ ಗಾಯಗಳಾಗಿವೆ. ಗಾಯಗೊಂಡಿರುವ ಸಂದೀಪನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಹಳೇ ವೈಷಮ್ಯ ಕಾರಣದಿಂದ ತೇಜು ಬಳ್ಳಾರಿ ಎಂಬಾತ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ದ್ದಾರೆ. ಈ ಕುರಿತಂತೆ ಬೆಂಡೀಗೇರಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಇ-ಮೇಲ್ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

Social Media Auto Publish Powered By : XYZScripts.com