ಆಮ್ಲಜನಕಕ್ಕಾಗಿ ತಾಳ್ಮೆ ಕಳೆದುಕೊಂಡು ಗುಂಡು ಹಾರಿಸಿದ ವ್ಯಕ್ತಿ!

ಕೊರೊನಾ ಉಲ್ಬಣದಿಂದಾಗಿ ದಿನೇ ದಿನೇ ದೇಶದೆಲ್ಲೆಡೆ ಆಮ್ಲಜನಕದ ತೊಂದರೆ ಎದುರಿಸುವಂತಾಗುತ್ತಿದೆ. ಆಮ್ಲಜನಕಕ್ಕಾಗಿ ಕಾಯುತ್ತಿದ್ದ ವ್ಯಕ್ತಿಯೋರ್ವ ತಾಳ್ಮೆ ಕಳೆದುಕೊಂಡು ಘಟಕದ ಹೊರಗೆ ಗುಂಡುಗಳನ್ನು ಹಾರಿಸಿದ ಘಟನೆ ಗುಜರಾತ್‌ನ ಕಚ್‌ನಲ್ಲಿ ನಡೆದಿದೆ.

ಕಚ್‌ನ ಭಚೌ ತಾಲ್ಲೂಕಿನಲ್ಲಿ ಈ ಘಟನೆ ನಡೆದಿದ್ದು, ಜನರು ಆಮ್ಲಜನಕ ಮರುಪೂರಣ ಘಟಕದ ಹೊರಗೆ ಸರತಿ ಸಾಲಿನಲ್ಲಿ ನಿಂತಿದ್ದರು. ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ನಾಲ್ಕು ಜನರು ಸರದಿಯಲ್ಲಿ ಬರಲು ನಿರಾಕರಿಸಿದ್ದಾರೆ. ಜೊತೆಗೆ ಸರದಿ ಸಾಲಿನಲ್ಲಿ ನಿಲ್ಲದೇ ತನ್ನ ಖಾಲಿ ಸಿಲಿಂಡರ್ ತುಂಬಿಸಿಕೊಡಲು ಘಟಕದ ನೌಕರರಿಗೆ ಒತ್ತಾಯಿಸಿದ್ದಾನೆ.

ನಾಲ್ಕು ಜನರು ಮತ್ತು ಆಮ್ಲಜನಕ ಮರುಪೂರಣ ಘಟಕದ ನೌಕರರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದಂತೆ, ಆರೋಪಿಗಳಲ್ಲಿ ಒಬ್ಬರು ಗಾಳಿಯಲ್ಲಿ ಗುಂಡು ಹಾರಿಸಿ ಜನರಲ್ಲಿ ಭೀತಿ ಹುಟ್ಟಿಸಿದರು. ಸ್ಥಳದಿಂದ ಪಲಾಯನ ಮಾಡುವ ಮೊದಲು ಆಮ್ಲಜನಕ ಮರುಪೂರಣ ಘಟಕದ ನೌಕರರನ್ನು ಬೆದರಿಸಲು ಅವರು ಇನ್ನೂ ಮೂರು ಸುತ್ತು ಗುಂಡು ಹಾರಿಸಿದ್ದಾರೆ.

ಘಟನೆಯ ಬಗ್ಗೆ ಈಗಾಗಲೇ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ತಲುಪಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights