ಕೋವಿಡ್‌ನಿಂದ ಚೇತರಿಸಿಕೊಂಡ ವ್ಯಕ್ತಿಗಳಲ್ಲಿ ಕ್ಷಯ ರೋಗ : ಆತಂಕಕಾರಿ ಸಮೀಕ್ಷಾ ವರದಿ ಬಿಡುಗಡೆ!

ರಾಜ್ಯದಲ್ಲಿ ಕೊರೊನಾ ಮೂರನೇ ಅಲೆಯ ಭೀತಿಯ ನಡುವೆಯೇ ಕೊರೊನಾದಿಂದ ಚೇತರಿಸಿಕೊಂಡ ಅತೀ ಹೆಚ್ಚು ಜನರಲ್ಲಿ ಕ್ಷಯ ರೋಗ ಪತ್ತೆಯಾಗಿದೆ.

ಆರೋಗ್ಯ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಈ ವಿಚಾರ ತಿಳಿದುಬಂದಿದೆ. ಹೀಗಾಗಿ ಕೋವಿಡ್‌ನಿಂದ ಚೇತರಿಸಿಕೊಂಡ ವ್ಯಕ್ತಿಗಳ ಮನೆ ಮನೆ ಭೇಟಿ ಮಾಡಿ ಕ್ಷಯರೋಗ ಪತ್ತೆಗಾಗಿ ಆರೋಗ್ಯ ಇಲಾಖೆ ಸಮೀಕ್ಷೆ ನಡೆಸಿದೆ.

ಆರೋಗ್ಯ ಇಲಾಖೆ ಆಗಸ್ಟ್ 16ರಿಂದ ಆಗಸ್ಟ್ 29ರ ಅವಧಿಯಲ್ಲಿ ಕೋವಿಡ್‌ನಿಂದ ಚೇತರಿಸಿಕೊಂಡ ವ್ಯಕ್ತಿಗಳ ಮತ್ತು ಸಂಪರ್ಕದಲ್ಲಿರುವವರ ಮನೆಗಳಿಗೆ ತೆರಳಿ ಕ್ಷಯ ರೋಗ ಪತ್ತೆ ಮಾಡುವ ಅಭಿಯಾನ ಹಮ್ಮಿಕೊಂಡಿತ್ತು. ಕೋವಿಡ್‌ನಿಂದ ಚೇತರಿಸಿಕೊಂಡ 5,37,333 ಜನರನ್ನು ಕ್ಷಯ ರೋಗ ಪರೀಕ್ಷೆಗೆ ಒಳಪಡಿಸಿದ್ದು, 104 ಜನರಲ್ಲಿ ಕ್ಷಯರೋಗ ಪತ್ತೆಯಾಗಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಇದೇ ವೇಳೆ ಕೋವಿಡ್‌ನಿಂದ ಚೇತರಿಸಿಕೊಂಡ ವ್ಯಕ್ತಿಗಳ ಮನೆಯ ಸಂಪರ್ಕದಲ್ಲಿರುವ 51 ಜನರಲ್ಲಿ ಕ್ಷಯ ರೋಗ ಕಂಡು ಬಂದಿದೆ.

ಕ್ಷಯ ಮತ್ತು ಕೋವಿಡ್ -19 ಸೋಂಕು ತ್ವರಿತ ಮತ್ತು ತೀವ್ರ ರೋಗ ಲಕ್ಷಣಗಳ ಬೆಳವಣಿಗೆ ಹಾಗೂ ರೋಗದ ಪ್ರಗತಿಯು ಎರಡೂ ರೋಗಿಗಳ ಕಳಪೆ ಫಲಿತಾಂಶದೊಂದಿಗೆ ಸಂಬಂಧಿಸಿದ್ದು, ರೋಗಿಗಳ ಫಲಿತಾಂಶಗಳನ್ನು ಸುಧಾರಿಸಲು, ಸಂಪರ್ಕಗಳ ಮತ್ತು ಸಮುದಾಯದಲ್ಲಿ ಪ್ರಕರಣವನ್ನು ಕಡಿಮೆ ಮಾಡಲು ಈ ಎರಡು ರೋಗಗಳ ಆರಂಭಿಕ ಪತ್ತೆ ಮತ್ತು ಚಿಕಿತ್ಸೆ ಅಗತ್ಯವಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights