ಮೈಸೂರಿನಲ್ಲಿ ದೇಗುಲ ತೆರವು ವಿಚಾರಕ್ಕೆ ಬಿಗ್ ಟ್ವಿಸ್ಟ್ : ಜಿಲ್ಲಾಡಳಿತ ಹೇಳುವುದೇನು..?

ಮೈಸೂರಿನಲ್ಲಿ ದೇಗುಲ ತೆರವು ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಜಿಲ್ಲಾಡಳಿತ ದೇವಸ್ಥಾನ ತೆರವಿಗೆ ಕಾರಣವನ್ನು ನೀಡಿದೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿ ಹರದನಹಳ್ಳಿ ಮಹದೇವಮ್ಮ ದೇಗುಲ ತೆರವು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ದೇಗುಲ ತೆರವು ವಿಚಾರಕ್ಕೆ ದೊಡ್ಡ ಮಟ್ಟಕ್ಕೆ ಜನಪ್ರತಿನಿಧಿಗಳು ಅಸಮಧಾನ ಹೊರಹಾಕಿದ್ದರು.ಹರದನಹಳ್ಳಿ ಮಹದೇವಮ್ಮ ದೇಗುಲ ತೆರವುಗೊಳಿಸಿದಕ್ಕೆ ಕಾರಣ ಕೇಳಿದ ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಜಿಲ್ಲಾಡಳಿತಾ ಪುರಾತತ್ವ ಇಲಾಖೆಯ ಪಟ್ಟಿಯಲ್ಲಿ ಈ ದೇವಾಲಯ ಇರಲಿಲ್ಲ. ಹೀಗಾಗಿ ದೇಗುಲ ತೆರವುಗೊಳಿಸಲಾಗಿದೆ ಎಂದು ಹೇಳಿದೆ. ಮಾತ್ರವಲ್ಲದೇ ದೇವಾಲಯ ರಾಜ್ಯ ಹೆದ್ದಾರಿಯಲ್ಲಿತ್ತು ಎಂದು ಜಿಲ್ಲಾಡಳಿತ ಮಾಹಿತಿಯನ್ನು ನೀಡಿದೆ. ಆದರೆ ದೇಗುಲ ಹೊಡೆದು ಹಾಕಿದ್ದು ಸಾಕಷ್ಟು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ. ಹೀಗಾಗಿ ಸಿಎಂ ಈ ಬಗ್ಗೆ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

ಅಧಿಕಾರಿಗಳು ಕೊಡುತ್ತಿರುವ ಕಾರಣದಿಂದ ಜನ ಸಾಮಾನ್ಯರು ಆಕ್ರೋಶ ಹೊರಹಾಕಿದ್ದಾರೆ. ತೀರಾ ಹಳೆಯ ದೇವಲಾಯಗಳನ್ನು ಪುರಾತತ್ವ ಇಲಾಖೆಗೆ ಸೇರಿಸಲಾಗಿದಿಯಾ..? ಸುಪ್ರೀಂ ಕೋರ್ಟ್ ನೀಡಿದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದಿಯಾ..? ಸುಪ್ರೀ ಕೋರ್ಟ್ ಸಾವಿರ ತೀರ್ಪು ನೀಡಿದೆ. ಅದರಂತೆ ಎಲ್ಲವೂ ನಡೆದಿದಿಯಾ..? ಅದೆಲ್ಲವನ್ನು ಬಿಟ್ಟು ಯಾಕೆ ದೇವಾಲಯದ ಮೇಲೆ ಕಣ್ಣು..? ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಮಾತ್ರವಲ್ಲದೇ ರಾಜ್ಯಾದ್ಯಂತ ದೇವಾಲಯಗಳ ತೆರವು ಬಗ್ಗೆ ಜನರಲ್ಲಿ ಆತಂಕ ಹೆಚ್ಚಾಗಿದೆ.

ಇನ್ನೂ ಎಂಪಿ, ಎಮ್ಎಲ್ಎ, ಸಚಿವರು ಬಿಜೆಪಿ ಅಧಿಕಾರದಲ್ಲಿ ಈ ಕಾರ್ಯ ಮಾಡುವುದು ಬೇಕಾಗಿರಲಿಲ್ಲ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights