ದಲಿತನ ವಿವಾಹದಲ್ಲಿ ಕಲ್ಲು ತೂರಾಟ : 9 ಜನರ ವಿರುದ್ಧ ಎಫ್‌ಐಆರ್!

ದಲಿತ ವ್ಯಕ್ತಿಯೊಬ್ಬರ ವಿವಾಹ ಮೆರವಣಿಗೆಯಲ್ಲಿ ಕಲ್ಲುಗಳನ್ನು ಎಸೆದ ವ್ಯಕ್ತಿಗಳ ಗುಂಪನ್ನು ಪೋಲೀಸರು ಬಂಧಿಸಿದ ಘಟನೆ ಗುಜರಾತ್‌ನ ಅರಾವಳ್ಳಿ ಜಿಲ್ಲೆಯಲ್ಲಿ ನಡೆದಿದೆ. ಬುಧವಾರ ಮದುವೆ ಮೆರವಣಿಗೆಯಲ್ಲಿ ಸಾಂಪ್ರದಾಯಿಕ ಆಚರಣೆ ಮತ್ತು ಡಿಜೆ ಸಂಗೀತ ವ್ಯವಸ್ಥೆಯನ್ನು ಬಳಸುವುದನ್ನು ಆಕ್ಷೇಪಿಸಿ ಈ ಕೃತ್ಯ ಮಾಡಿದ್ದಾರೆ ಎನ್ನಲಾಗುತ್ತಿದೆ.

ಮಂಗಳವಾರ ಸಂಜೆ ಬಯಾದ್ ಪಟ್ಟಣದ ಲಿಂಚ್ ಗ್ರಾಮದಲ್ಲಿ ಮೆರವಣಿಗೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ರಜಪೂತ ಸಮುದಾಯದ ಒಂಬತ್ತು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಂಬಲಿಯರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆರ್ ಎಂ ದಾಮರ್ ತಿಳಿಸಿದ್ದಾರೆ.

ಮದುವೆ ಮೆರವಣಿಗೆ ಹಳ್ಳಿಗೆ ಪ್ರವೇಶಿಸಿದಾಗ ಲಿಂಚ್‌ನ ಕೆಲವರು ಕಲ್ಲು ಎಸೆದಿದ್ದಾರೆ ಎಂದು ವಧುವಿನ ಸೋದರಸಂಬಂಧಿ ನೀಡಿದ ದೂರನ್ನು ಉಲ್ಲೇಖಿಸಿ ಅಧಿಕಾರಿ ಹೇಳಿದ್ದಾರೆ.

“ಮೆರವಣಿಗೆಯಲ್ಲಿ ‘ಸಫಾ’ (ಸಾಂಪ್ರದಾಯಿಕ ಶಿರಸ್ತ್ರಾಣ) ಧರಿಸಿದ ದಲಿತ ಪುರುಷರು ಮತ್ತು ಮಹಿಳೆಯರನ್ನು ಆರೋಪಿಗಳು ಆಕ್ಷೇಪಿಸಿ ಮೆರವಣಿಗೆಯಲ್ಲಿ ಕಲ್ಲುಗಳನ್ನು ಎಸೆದಿದ್ದಾರೆ.  ದೂರುದಾರ ಮತ್ತು ಇತರ ಕುಟುಂಬ ಸದಸ್ಯರು ನೀಡಿದ ದೂರಿನ ಪ್ರಕಾರ, ಆರೋಪಿಗಳಲ್ಲಿ ಒಬ್ಬರು ವಧುವಿನ ಸಂಬಂಧಿಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

“ಮದುವೆಯ ಸಮಯದಲ್ಲಿ ಸಾಂಪ್ರದಾಯಿಕ ಶಿರಸ್ತ್ರಾಣವನ್ನು ಧರಿಸುವುದನ್ನು ಮತ್ತು ಡಿಜೆ ವ್ಯವಸ್ಥೆಯಲ್ಲಿ ಸಂಗೀತ ನುಡಿಸುವುದನ್ನು ತಪ್ಪಿಸುವಂತೆ ವರನ ಕುಟುಂಬ ಮತ್ತು ಇತರರಿಗೆ ಆರೋಪಿಗಳು ಎಚ್ಚರಿಕೆ ನೀಡಿದ್ದಾರೆ. ಅವರು ದೂರುದಾರ ಮತ್ತು ಅವರ ಕುಟುಂಬ ಸದಸ್ಯರಿಗೆ ಮಾರಣಾಂತಿಕ ಬೆದರಿಕೆಗಳನ್ನು ಸಹ ನೀಡಿದ್ದಾರೆ” ಎಂದು ದಾಮೋರ್ ಹೇಳಿದ್ದಾರೆ. ಗಲಭೆ, ಹಲ್ಲೆ, ಕ್ರಿಮಿನಲ್ ಬೆದರಿಕೆ ಆರೋಪದ ಮೇಲೆ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights