ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಟಾರ್ ನಟರು : ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ!

ನವರಸ ನಾಯಕ  ಜಗ್ಗೇಶ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನೆಚ್ಚಿನ ಸ್ಟಾರ್ ನಟರಿಗೆ ಅಭಿಮಾನಿಗಳು ತುಂಬು ಹೃದಯದ ಶುಭಾಶಯಗಳನ್ನು ಕೋರುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟರ ಫೋಟೋ ಹಾಕಿ ಅಭಿಮಾನಿಗಳು, ರಾಜಕೀಯ ನಾಯಕರು ಶುಭಾಶಯ ತಿಳಿಸುತ್ತಿದ್ದಾರೆ.

ಚಂದನವನದ ಚಂದದ ನಟರಾದ ಜಗ್ಗೇಶ್ 58ನೇ ವಸಂತಕ್ಕೆ ಹಾಗೂ ಪುನೀತ್ 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪ್ರತಿ ಬಾರಿ ಅಭಿಮಾಣಿಗಳ ಮಧ್ಯೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ನಟ ಪುನೀತ್ ಕೊರೊನಾ ಕಾರಣದಿಂದಾಗಿ ಈ ಬಾರಿಯೂ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. ಜೊತೆಗೆ ಈ ಮುಂಚಿತವಾಗಿಯೂ ಅಭಿಮಾನಿಗಳಿಗೆ ಮನೆಗೆ ಬರದಂತೆ ಸೂಚನೆ ಕೂಡ ಪುನೀತ್ ನೀಡಿದ್ದರು.

ಇನ್ನೂ ಪುನೀತ್ ಸದ್ಯ ಜೇಮ್ಸ್ ಸಿನಿಮಾದಲ್ಲಿ ಬ್ಯೂಸಿಯಾಗಿದ್ದು, ಇದರ ಹೊಸ ಪೋಸ್ಟರ್ ಅಭಿಮಾನಿಗಳಿಗೆ ಉಡುಗೊರೆಯಾಗಿದೆ. ಜೊತೆಗೆ ಯುವರತ್ನ ಸಿನಿಮಾ ತಂಡದಿಂದ ಒಂದು ಸಾಂಗ್ ಕೂಡ ರಿಲೀಸ್ ಮಾಡಲಾಗಿದೆ,

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights