ಸೌದಿ ಅರೇಬಿಯಾದಲ್ಲಿ ಭಾರೀ ಹಿಮಪಾತ : 50 ವರ್ಷಗಳಲ್ಲಿಲ್ಲದ ದಾಖಲೆ ಸೃಷ್ಟಿ!

ಸೌದಿ ಅರೇಬಿಯಾದಲ್ಲಿ ಹಿಂದೆಂದು ಕಾರಣದಂತೆ ಭಾರೀ ಹಿಮಪಾತವಾಗಿದ್ದು ಜನ ಜೀವನ ಅಸ್ಥವ್ಯಸ್ಥಗೊಂಡಿದೆ. ಉರಿಯುವ ಬಿಸಿಲು ಮರುಭೂಮಿ ದೇಶದಲ್ಲಿ ಹಿಮಪಾತ ಹೇಗೆ ಸಾಧ್ಯ ಎಂದು ಜನರು ದಿಗ್ಬ್ರಾಂತಗೊಂಡಿದ್ದಾರೆ. ಇತ್ತೀಚೆಗೆ, ಅನೇಕ ಚಿತ್ರಗಳು ಮತ್ತು ವೀಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಸೌದಿಯಲ್ಲಿ ಹಿಮಪಾತವಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ಚಿತ್ರಗಳಿಂದ ಸೌದಿ ಅರೇಬಿಯಾದಲ್ಲಿ ಹಿಮಪಾತವಾಗುವುದನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ಮರಳಿನ ಜೊತೆಗೆ ವಾಸಿಸುವ ಒಂಟೆಗಳು ಮಂಜಿನ ಮೇಲೆ ಮಲಗಿವೆ. ಒಂಟಿಗಳ ಮೇಲೂ ಹಿಮದ ಮುಚ್ಚುತ್ತಿದೆ. ಈ ವೀಡಿಯೊದಲ್ಲಿ ಸೌದಿ ಅರೇಬಿಯಾದಲ್ಲಿ ಎಷ್ಟೊಂದು ಹಿಮಪಾತವಾಗಿದೆಯೆಂದು ಸ್ಪಷ್ಟವಾಗಿ ತೋರಿಸುತ್ತದೆ. ಸುಮಾರು 50 ವರ್ಷಗಳ ನಂತರ ಸೌದಿಯಲ್ಲಿ ಹಿಮ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಈ ಮೊದಲು ಹಿಮಪಾತವಾಗಿದೆ, ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಲ್ಲ.

ಮಾತ್ರವಲ್ಲ ಸೌದಿಯಲ್ಲಿನ ಹಿಮಪಾತ ಇಡೀ ಕೊಲ್ಲಿ ರಾಷ್ಟ್ರಗಳಿಗೆ ಅಪರೂಪದ ಘಟನೆ ಎಂದು ವಿವರಿಸಲಾಗುತ್ತಿದೆ. ಹಿಮಾವೃತ ಚಳಿಗಾಲ ಒಂದು ವಾರದ ಹಿಂದೆ ಇಲ್ಲಿಗೆ ಬಂದು ಬಡಿದಿದೆ. ತಾಪಮಾನ ಮೈನಸ್ 2 ಡಿಗ್ರಿ ತಲುಪಿದೆ. ಈ ಭೀಕರ ಹಿಮಪಾತದಿಂದ ಪ್ರಾಣಿಗಳು ಮತ್ತು ವಸತಿ ಪ್ರದೇಶದ ಜನರು ಕೂಡ ತುಂಬಾ ತೊಂದರೆಗೀಡಾಗಿದ್ದಾರೆ. ಹಿಮಪಾತಕ್ಕೆ ಸಂಬಂಧಿಸಿದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂದಿನ ದಿನಗಳಲ್ಲಿ ಶೀತವು ಸಾಕಷ್ಟು ಹೆಚ್ಚಾಗಬಹುದು ಎಂದು ಹವಾಮಾನ ಇಲಾಖೆ ಹೇಳುತ್ತದೆ. ಜನರು ಮನೆಯೊಳಗೆ ಇರಬೇಕೆಂದು ಹವಾಮಾನ ಇಲಾಖೆ ಸೂಚಿಸಿದೆ. ವಿಶೇಷವಾಗಿ ರಾತ್ರಿಯಲ್ಲಿ ಜನರು ಹೆಚ್ಚು ಬೆಚ್ಚಗಿನ ಬಟ್ಟೆಗಳನ್ನು ಧರಿಸಲು ಕೇಳಿಕೊಳ್ಳಲಾಗಿದೆ.

https://twitter.com/RexChapman/status/1362214038780981249?ref_src=twsrc%5Etfw%7Ctwcamp%5Etweetembed%7Ctwterm%5E1362214038780981249%7Ctwgr%5E%7Ctwcon%5Es1_&ref_url=https%3A%2F%2Fenglish.newstracklive.com%2Fnews%2Fsnow-fall-in-saudi-arab-breaks-record-of-50-years-mc24-nu764-ta321-1147512-1.html

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights