ಶೀಘ್ರದಲ್ಲೇ ಶಶಿಕಲಾ ರಿಲೀಸ್..? : ಇದೇ ಡಿಸೆಂಬರ್ ನಲ್ಲಿ ಬಿಡುಗಡೆಗೆ ಚಿನ್ನಮ್ಮ ಮನವಿ!

ಉಚ್ಚಾಟಿತ ಎಐಎಡಿಎಂಕೆ ಮುಖಂಡೆ ವಿ.ಕೆ.ಶಶಿಕಲಾ ಅವರನ್ನು ಯಾವುದೇ ಸಮಯದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಬಹುದು ಎಂಬ ಹೇಳಿಕೆ ದಟ್ಟವಾಗಿದೆ.

ಜಯಲಲಿತಾ ಆಪ್ತೆ ಚಿನ್ನಮ್ಮಾಗೆ ಫೆಬ್ರವರಿ 15ಕ್ಕೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ಮುಕ್ತಾಯಗೊಳ್ಳುತ್ತದೆ. ಪ್ರತಿ ತಿಂಗಳು3 ದಿನಗಳಂತೆ ನಾಲ್ಕು ವರ್ಷದಲ್ಲಿ 135 ರಜೆ ದಿನಗಳನ್ನು ಕಳೆದು ಡಿಸೆಂಬರ್ ನಲ್ಲೇ ಬಿಡುಗಡೆ ಮಾಡುವಂತೆ ಮನವಿ ಪತ್ರವನ್ನು ಶಶಿಕಲಾ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ.

ತಮಿಳುನಾಡು ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಇತ್ತ ಬಿಡುಗಡೆಗೆ ಲಾಬಿ ನಡೆಯುತ್ತಿದೆ. ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿರುವ ಚಿನ್ನಮ್ಮ ಕಳೆದ ನಾಲ್ಕು ವರ್ಷ ಜೈಲಿನಲ್ಲಿದ್ದು ಕನ್ನಡ ಕಲಿಕೆಯ ಕೋರ್ಸ್ ಮುಗಿಸಿದ್ದಾರೆ. ನಲಿಕಲಿ ಮುಲಕ ಕನ್ನಡ ಓದು ಮತ್ತು ಬರಹವನ್ನು ಕಲಿತಿದ್ದಾರೆ. ಮಾತ್ರವ್ಲಲದೇ ಜೈಲಿನಲ್ಲಿ ಶಶಿಕಲಾ ತರಕಾರಿ ಬೆಳೆದು ಅದಕ್ಕೆ ಕೂಲಿ ಕೂಡ ಪಡೆದಿದ್ದಾರೆ. ಹೀಗೆ ಸನ್ನಡೆತೆ ಮತ್ತು ರಜೆ ದಿನಗಳನ್ನು ಪರಿಗಣಿಸಿ ಬೇಗ ಬಿಡುಗಡೆಗೆ ಚಿನ್ನಮ್ಮ ಮನವಿ ಮಾಡಿಕೊಂಡಿದ್ದಾರೆ. ಈ ಮನವಿ ಸದ್ಯ ಕಾನೂನು ಸಲಹೆಗೆ ಹೋಗಿದೆ. ಒಂದು ವೇಳೆ ಇದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕರೆ ಶಶಿಕಲಾಗೆ ಬಿಡುಗಡೆ ಭಾಗ್ಯ ಸಿಗಲಿದೆ.

ಈಗಾಗಲೇ ಶಶಿಕಲ 10 ಕೋಟಿ ದಂಡ ಕಟ್ಟಿದ್ದಾರೆ. ಇನ್ನೇನು ನಾಲ್ಕು ವರ್ಷ ಜೈಲು ಶಿಕ್ಷೆಯನ್ನೂ ಮೂರ್ಣಗೊಳಿಸಲಿದ್ದಾರೆ. ಹೀಗಾಗಿ ಒಂದು ವೇಳೆ ಮನವಿ ಸ್ವೀಕರಿಸದೇ ಇದ್ದರೂ ಜನವರಿ ಅಥವಾ ಫೆಬ್ರವರಿಯಲ್ಲಿ ಶಶಿಕಲಾ ಬಿಡುಗಡೆ ಹೊಂದುವ ಸಾಧ್ಯತೆ ಇದೆ.

ಆದಾಯಕ್ಕೂ ಮೀರಿ ಅಧಿಕ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಶಶಿಕಲಾ, ಇಳವರಸಿ ಮತ್ತು ಸುಧಾಕರನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ2017ರ ಫೆಬ್ರವರಿಯಿಂದ ಜೈಲುವಾಸ ಅನುಭವಿಸುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights