ಜೊತೆಜೊತೆಯಲಿ ಸೀರಿಯಲ್‌ ನಟಿ ಮೇಘಾಶೆಟ್ಟಿ “ತ್ರಿಬಲ್ ರೈಡಿಂಗ್’ ಮೂಲಕ ಬೆಳ್ಳಿತೆರೆಗೆ ಎಂಟ್ರಿ!

ಕನ್ನಡ ಕಿರುತೆರೆಯಲ್ಲಿ ಟಾಪ್‌ ಟಿಆರ್‌ಪಿ ಗಳಿಸುವ ಧಾರಾವಾಹಿ ಎಂದು ಖ್ಯಾತಿ ಪಡೆದಿರುವ ಜೊತೆಜೊತೆಯಲಿ ಸೀರಿಯಲ್‌ನ ನಟಿ ಮೇಘಾಶೆಟ್ಟಿ ಕಿರುತೆರೆಯಿಂದ ಬೆಳ್ಳಿತೆರೆಗೆ ಜಿಗಿಯುತ್ತಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ, ಅನಿರುದ್‌ ಅಭಿಯನದ ‘ಜೊತೆಜೊತೆಯಲಿ’ ಧಾರವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ಮೇಘಾಶೆಟ್ಟಿ, ನಟ ಗಣೇಶ್‌ ಅಭಿನಯದ ‘ತ್ರಿಬಲ್‌ ರೈಡಿಂಗ್’’ಸಿನಿಮಾದಲ್ಲಿ ನಟಿಸಲಿದ್ದಾರೆ.

ನಿರ್ದೇಶಕ ಮಹೇಶ್‌ ಗೌಡ ನಿರ್ದೇಶಿಸುತ್ತಿರುವ ತ್ರಿಬಲ್‌ ರೈಡಿಂಗ್ ಸಿನಿಮಾದಲ್ಲಿ ಗಣೇಶ್‌ ಜೊತೆಗೆ ನಾಯಕಿಯಾಗಿ ಮೇಘಾಶೆಟ್ಟಿ ಬಣ್ಣ ಹಚ್ಚುತ್ತಿದ್ದಾರೆ.

ಗಣೇಶ್ 'ಜೊತೆಯಲಿ' 'ತ್ರಿಬಲ್ ರೈಡಿಂಗ್' ಹೋಗೋಕೆ ರೆಡಿಯಾಗ್ತಿದ್ದಾರೆ ಅನು ಸಿರಿಮನೆ.!

ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿರುವ ಮೇಘಶೆಟ್ಟಿ, ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳಲು ಸಿದ್ದರಾಗಿದ್ದಾರೆ. ಸೀರಿಯಲ್‌ ಜೊತೆಗೆ ಸಿನಿಮಾದಲ್ಲಿಯೂ ನಟಿಸುತ್ತಿದ್ದು, ಸಮಯವನ್ನು ಹೊಂದಿಸಿಕೊಳ್ಳಲು ಮುಂದಾಗಿದ್ದಾರೆ.

ರಂಗಭೂಮಿ ಕಲಾವಿದರ ಕುಟುಂಬ ಹಿನ್ನೆಲೆಯಿಂದ ಬಂದಿರುವ ಮೇಘಾಶೆಟ್ಟಿ, ಕಿರುತೆರೆಯ ಮೂಲಕ ಕನ್ನಡಿಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಇದೀಗ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದು, ಜನರ ಪ್ರೀತಿ ಸಿನಿಮಾದಲ್ಲಿಯೂ ಸಿಗಲಿದೆ ಎಂಬ ಭರವಸೆ ಇಟ್ಟಿದ್ದಾರೆ.

ತ್ರಿಬಲ್ ರೈಡಿಂಗ್ ಚಿತ್ರಕ್ಕೆ ಸಾಯಿ ಕಾರ್ತಿಕ್ ಸಂಗೀತ ಸಂಯೋಜಿಸಲಿದ್ದು, ಜೈ ಆನಂದ್ ಅವರ ಛಾಯಾಗ್ರಹಣವಿರಲಿದೆ. ಸಾಧು ಕೋಕಿಲ, ರಂಗಾಯಣ ರಘು, ರವಿಶಂಕರ್ ಗೌಡ, ಕುರಿ ಪ್ರತಾಪ್ ಮತ್ತು ಹಿರಿಯ ಕಲಾವಿದರಾದ ಉಮೇಶ್, ಡಿಂಗ್ರಿ ನಾಗರಾಜ್ ಮತ್ತಿತರ ತಾರಾಗಣವಿದೆ.


ಇದನ್ನೂ ಓದಿ: ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ : ರಾಗಿಣಿ, ಸಂಜನಾ ಜಾಮೀನು ಅರ್ಜಿ ತಿರಸ್ಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights