ಕೆಜಿಎಫ್-2 : ಪ್ರಶಾಂತ್ ನೀಲ್ ಅವರೊಂದಿಗಿನ ಕೆಲಸದ ಅನುಭವ ಹಂಚಿಕೊಂಡ ಸಂಜಯ್ ದತ್..!

ಕೆಜಿಎಫ್: ಅಧ್ಯಾಯ 2 ರಲ್ಲಿ ಖಳನಾಯಕನಾಗಿ ನಟಿಸಿರುವ ಬಾಲಿವುಡ್ ನಟ ಸಂಜಯ್ ದತ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಜನವರಿ 7 ರಂದು ಕೆಜಿಎಫ್: ಅಧ್ಯಾಯ 2 ಚಿತ್ರದ ಟೀಸರ್ ಬಿಡುಗಡೆಗೊಳಿಸಲಾಗಿದ್ದು ಅಂದಿನಿಂದ ಟೀಸರ್ ಅಂತರ್ಜಾಲದಲ್ಲಿ ಟ್ರೆಂಡಿಂಗ್ ಕ್ರಿಯೇಟ್ ಮಾಡಿದೆ. ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ವ್ಯಾಪಕ ಪ್ರತಿಕ್ರಿಯೆಯನ್ನು ಗಳಿಸಿದೆ.

ಸಂಜಯ್ ದತ್ ಕೆಜಿಎಫ್ ಅಧ್ಯಾಯ 2 ರಲ್ಲಿ ಪ್ರತಿಸ್ಪರ್ಧಿ ಅಧೀರಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಜನ್ಮದಿನದಂದು ಬಿಡುಗಡೆಯಾದ ಅವರ ನೋಟ ವೈಕಿಂಗ್ಸ್‌ನಿಂದ ಸ್ಫೂರ್ತಿ ಪಡೆದಿದೆ. ಕೆಜಿಎಫ್: ಅಧ್ಯಾಯ 2 ಗಾಗಿ ನಟ ಡಿಸೆಂಬರ್ ಮೊದಲ ವಾರದಿಂದ ನಿರಂತರವಾಗಿ ಚಿತ್ರೀಕರಣ ನಡೆಸುತ್ತಿದ್ದಾರೆ. ವಾಸ್ತವವಾಗಿ, ಚಿತ್ರದ ಹೆಚ್ಚಿನ ಆಕ್ಷನ್ ಸನ್ನಿವೇಶಗಳನ್ನು ಯಾವುದೇ ಬಾಡಿ ಡಬಲ್ ಬಳಸದೆ ಸ್ವತಃ ಮಾಡಿದ್ದು ವಿಶೇಷ.

ಟೀಸರ್ ನಲ್ಲಿ ಸಂಜಯ್ ದತ್ ಅವರ ಪಾತ್ರ ಕೂಡ ಗಮನ ಸೆಳೆದಿದೆ. ಈ ಬಗ್ಗೆ ಮಾತನಾಡಿದ ಸಂಜಯ್ ದತ್ ಪ್ರಶಾಂತ್ ನೀಲ್ ಅವರ ನಿರ್ದೇಶನದ ಕೌಶಲ್ಯವನ್ನು ಶ್ಲಾಘಿಸಿದ್ದಾರೆ. ಅವರೊಂದಿಗೆ ಕೆಲಸ ಮಾಡಿದರೆ ನಾನು ಹಾಯಾಗಿರುತ್ತೇನೆ ಎಂದು ಹೇಳಿದ್ದಾರೆ.

“ಪ್ರಶಾಂತ್ ತುಂಬಾ ವಿನಮ್ರ ವ್ಯಕ್ತಿ. ಅವರೊಂದಿಗೆ ಚಿತ್ರೀಕರಣ ಮಾಡುವುದು ತುಂಬಾ ಸುಗಮವಾದ ನೌಕಾಯಾನದ ಅನುಭವವಾಗುತ್ತದೆ. ಅವರೊಂದಿಗೆ ನಾನು ಕೆಲಸ ಮಾಡುವುದು  ಮೊದಲ ಬಾರಿಗೆ. ನಾನು ಅವರೊಂದಿಗೆ ಕೆಲಸ ಮಾಡಲು ಕಂಫರ್ಟೇಬಲ್ ಆಗಿದ್ದೇನೆ. ಪ್ರಶಾಂತ್ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇನೆ. ನಾವು ಸಾಕಷ್ಟು ವಿಚಾರಗಳನ್ನು ಪರಸ್ಪರ ಹಂಚಿಕೊಂಡಿದ್ದೇವೆ. ಅವರ ಕೆಲಸದ ಶೈಲಿ ವಿಭಿನ್ನವಾಗಿದೆ ಮತ್ತು ಅವರ ನಿರ್ದೇಶನವು ನನಗೆ ಬಹಳಷ್ಟು ಕಲಿಯಲು ಸಹಾಯ ಮಾಡಿದೆ” ಎಂದಿದ್ದಾರೆ.

ಸಂಜಯ್ ದತ್ ಮತ್ತು ಯಶ್ ಇಬ್ಬರ ಅಭಿಮಾನಿಗಳು ಚಿತ್ರದ ಬಗ್ಗೆ ಸಾಕಷ್ಟು ಉತ್ಸುಕರಾಗಿದ್ದು ಚಿತ್ರದ ಬಿಡುಗಡೆಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.ಕೆಜಿಎಫ್ 2 ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights