ದೇಶದಲ್ಲಿ ಹೊಸದಾಗಿ 3,780 ಕೋವಿಡ್ ಸಾವು : 3.82 ಲಕ್ಷಕ್ಕೂ ಹೆಚ್ಚು ಹೊಸ ಕೇಸ್!

ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣೀಸುತ್ತಿಲ್ಲ ದಿನದಿಂದ ದಿನಕ್ಕೆ ಕೊರೊನಾ ಜನರ ಆತಂಕವನ್ನು ಹೆಚ್ಚಿಸುತ್ತಲೇ ಇದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಹೊಸದಾಗಿ 3,780 ಕೋವಿಡ್ ಸಾವು ಸಂಭವಿಸಿದ್ದು, 3.82 ಲಕ್ಷಕ್ಕೂ ಹೆಚ್ಚು ಹೊಸ ಕೇಸ್ ದಾಖಲಾಗಿವೆ.

ಕಳೆದ 24 ಗಂಟೆಗಳಲ್ಲಿ ಭಾರತವು 3,82,315 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದ್ದು, ದೇಶದ ಒಟ್ಟಾರೆ ಪ್ರಕರಣಗಳ ಸಂಖ್ಯೆ  2,06,65,148 ಕ್ಕೆ ಏರಿಕೆಯಾಗಿದೆ. ಹೊಸ ಸೋಂಕಿತರೊಂದಿಗೆ ದೇಶದ ಒಟ್ಟು ಸಕ್ರಿಯ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 34,87,229 ಕ್ಕೆ ಏರಿದೆ ಎಂದು ಕೇಂದ್ರ ಕುಟುಂಬ ಮತ್ತು ಕಲ್ಯಾಣ ಸಚಿವಾಲಯ ಬುಧವಾರ ಬೆಳಿಗ್ಗೆ ಬಿಡುಗಡೆ ಮಾಡಿದ ಮಾಹಿತಿಯಲ್ಲಿ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ 3,780 ಜನರು ಸೋಂಕಿಗೆ ಮೃತಪಟ್ಟಿದ್ದು, ದೇಶಾದ್ಯಂತದ ಮೃತರ ಸಂಖ್ಯೆ 2,26,188 ಕ್ಕೆ ತಲುಪಿದೆ. ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಇದು ವರದಿಯಾದ ಅತಿ ಹೆಚ್ಚು ಕೋವಿಡ್ ದೈನಂದಿನ ಸಾವಿನ ಪ್ರಕರಣವಾಗಿದೆ. ಮಹಾರಾಷ್ಟ್ರದಲ್ಲಿ 891 ಗರಿಷ್ಠ ಸಾವುನೋವು ಸಂಭವಿಸಿದ್ದು, ಉತ್ತರಪ್ರದೇಶದಲ್ಲಿ 351 ದೈನಂದಿನ ಸಾವುಗಳು ಸಂಭವಿಸಿವೆ.

ಅಲ್ಲದೆ, ಇದುವರೆಗೆ ದೇಶದಲ್ಲಿ ಒಟ್ಟು 1,69,51,731 ಸೋಂಕಿನಿಂದ ಚೇತರಿಸಿಕೊಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಬೆಳಿಗ್ಗೆ ತಿಳಿಸಿದೆ.

ಒಂದೇ ದಿನದಲ್ಲಿ ಗರಿಷ್ಠ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿರುವ ಮೊದಲ ಐದು ರಾಜ್ಯಗಳಲ್ಲಿ ಮಹಾರಾಷ್ಟ್ರದಲ್ಲಿ 51,880 ಪ್ರಕರಣಗಳು, ನಂತರ ಕರ್ನಾಟಕ 44,631 ಪ್ರಕರಣಗಳು, ಕೇರಳದಲ್ಲಿ 37,190 ಪ್ರಕರಣಗಳು, ಉತ್ತರ ಪ್ರದೇಶ 25,770 ಪ್ರಕರಣಗಳು ಮತ್ತು ತಮಿಳುನಾಡು 21,228 ಪ್ರಕರಣಗಳನ್ನು ದಾಖಲಿಸಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights